ಯಾವಾಗ್ಲೂ ಒಂದೇ ತಿನಿಸನ್ನು ತಿನ್ನೋಕೆ ಬೇಜಾರಾಗುತ್ತೆ ಆದರೆ ಮಕ್ಕಳಿಗೆ ತರಹ ತರಹದ ತಿಂಡಿ ತಿನಿಸುಗಳನ್ನು ಮಾಡಿಕೊಟ್ಟರೆ ಅವರ ಖುಷಿಗೆ ಇತಿ ಮಿತಿಗಳಲ್ಲಿ, ದೊಡ್ಡವರು ಕೂಡ ಮನೇಲಿ ಒಂದೇ ರೀತಿಯ ಅಡುಗೆ ಮಾಡ್ತಿರಾ ಅನ್ನೋರು ಇದ್ದಾರೆ, ಅವರಿಗೆಲ್ಲ ಬೇರೆ ಬೇರೆ ತರಹದ ತಿನಿಸುಗಳು ಬೇಕು. ಆದರೆ ಮಾಡಲು ಸಮಯವಿಲ್ಲದ ಕಾರಣ ಯಾವುದು ಹೊಸ ರುಚಿಯೂ ನಮ್ಮ ಬಾಯಿಗೆ ಬೀಳುವುದಿಲ್ಲ ಇದ್ದಂತಹ ಸಮಯದಲ್ಲೇ ರುಚಿಯಾದ ಮತ್ತು ಶುಚಿಯಾದ ತಿನಿಸುಗಳನ್ನು ಮಾಡಿ ಕೊಟ್ಟರೆ ಮನೆಯವರಿಗೆಲ್ಲಾ ತುಂಬಾ ಸಂತಸವಾಗುತ್ತದೆ. ಯಾವಾಗಲೂ ಉಪ್ಪಿಟ್ಟು ಅವಲಕ್ಕಿ ಚಿತ್ರನ್ನ ಪುಳಿಯೋಗರೆ ಪುಲಾವ್ ಪೊಂಗಲ್ ಚಪಾತಿ ರೊಟ್ಟಿ ಈ ತರಹದ ಆಹಾರವನ್ನು ಸೇವನೆ ಮಾಡಿ ಬೇಸರ ಬಂದು ಬಿಟ್ಟಿರುತ್ತದೆ. ವಾರದ ಅಂತ್ಯದಲ್ಲಿ ಹೊಸ ರುಚಿಗೆ ಸಮಯ ಕೊಡಬೇಕು ಮನೆಯಲ್ಲೇ ಇರುವಂತಹ ತರಕಾರಿಗಳನ್ನು ಬಳಸಿ ಹೊಸ ರುಚಿ ಮಾಡುವುದು ಅಡುಗೆಯಲ್ಲಿ 1 ಬಗೆಯ ಕಲೆ ಇರುವ ಪದಾರ್ಥಗಳನ್ನು ಬಳಸಿ ಹೊಸ ರುಚಿ ಮಾಡಿದರೆ ಅದರಿಂದ ಆಗುವ ಸಂತಸ ಇನ್ನೊಂದಿಲ್ಲ, ಆಚೆಕಡೆ ಊಟಕ್ಕೆ ಹೋಗದೆ ಮನೆಯಲ್ಲೇ ಈ ತರಹದ ತಿನಿಸುಗಳನ್ನು ಮಾಡಿದರೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟವಾಗುತ್ತದೆ ಮತ್ತು ದೇಹಕ್ಕೆ ಆರೋಗ್ಯಕರವಾಗಿರುತ್ತದೆ ಮನೆಯಲ್ಲಿರುವ ಆಲೂಗಡ್ಡೆ ಮತ್ತೆ ಮೆಂತೆ ಸೊಪ್ಪಿನಿಂದ ಈ ತಿನಿಸನ್ನು ರುಚಿಯಾಗಿ ಮತ್ತು ಶುಚಿಯಾಗಿ ಮಾಡಿಕೊಂಡು ತಿನ್ನಬಹುದು. ಅದು ಯಾವ ತಿನಿಸು ಅದನ್ನ ಹೇಗೆ ಮಾಡೋದು ಅಂತೀರಾ, ಈ ತಿನಿಸಿನ ಹೆಸರು ಆಲೂ ಮೇತಿ ಟಿಕ್ಕಿ ಇದನ್ನ ಹೇಗೆ ಮಾಡೋದು ಅಂತೀರಾ ಇಲ್ಲಿದೆ ಸರಳ ವಿಧಾನ

** ಬೇಕಾಗಿರುವ ಸಾಮಾಗ್ರಿಗಳು ‌**

* ಬೇಯಿಸಿ ಸಿಪ್ಪೆತೆಗೆದು ಸ್ಮ್ಯಾಶ್ ಮಾಡಿದ ಆಲೂಗಡ್ಡೆ 1 ಕೆಜಿ (.ನಿಮ್ಮ ಅಳತೆಯ ಪ್ರಕಾರ).

* ಹೆಚ್ಚಿದ ಮೆಂತ್ಯ ಸೊಪ್ಪು 1 ಕಪ್.

* ಹೆಚ್ಚಿದ ಈರುಳ್ಳಿ 2.

*  ಹೆಚ್ಚಿದ ಹಸಿ ಮೆಣಸಿನಕಾಯಿ 1 ಅಥವಾ ಎರಡು.

* ಎಣ್ಣೆ ಅರ್ಧ ಕಪ್

* ಜೀರಿಗೆ ಒಂದು ಅರ್ಧ ಟೀ ಚಮಚ.

* ಜೀರಿಗೆ ಪುಡಿ 2 ಟೀಚಮಚ.

*ಅರಿಶಿಣ ಪುಡಿ ಕಾಲು ಟೀ ಚಮಚ

* ಕಸುರಿ ಮೇತಿ 1 ಟೀಚಮಚ

* ಕಸೂರಿ ಮೇಥಿ ಪುಡಿ ಕಾಲು ಟೀ ಚಮಚ

* ಗರಂ ಮಸಾಲಾ ಪುಡಿ ಕಾಲು ಟೀ ಚಮಚ

* ಬ್ರೆಡ್ ಚೂರು ಕಾಲು ಕಪ್

* ಹೆಚ್ಚಿದ ಕೊತ್ತಂಬರಿ ಸೊಪ್ಪು ಅರ್ಧ ಕಪ್

* ಚಾಟ್ ಮಸಾಲೆ 2 ಟೀಚಮಚ

* ಉಪ್ಪು ರುಚಿಗೆ ತಕ್ಕಷ್ಟು

* ಹುಳಿ ಮಾವಿನ ಪುಡಿ ಒಂದು ಚಮಚ

** ತಯಾರಿಸುವ ವಿಧಾನ**

* ಮೊದಲಿಗೆ ದಪ್ಪ ತಳದ ಪಾತ್ರೆಯನ್ನಿಟ್ಟು ಅಥವಾ ತವದ ಮೇಲೆ ಎಣ್ಣೆ ಬಿಸಿಮಾಡಿಕೊಂಡು ಅದಕ್ಕೆ ಜೀರಿಗೆ ಹೆಚ್ಚಿದ ಈರುಳ್ಳಿ    ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಬೇಕು.

* ನಂತರ ಅದಕ್ಕೆ ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು.

* ಈ ಮಿಶ್ರಣವನ್ನು ಸುಮಾರು ಒಂದು ಗಂಟೆ ತಣ್ಣಗಾಗಲು ಬಿಡಬೇಕು ನಂತರ ಇದಕ್ಕೆ ಸ್ವಲ್ಪ ನಿಮಗೆ ಹೇಗೆ ಬೇಕೋ ಆ ತರದ ಉಂಡೆ ಮಾಡಿ ಅಂಗೈಯಲ್ಲಿ ಹಾಕಿಕೊಂಡು ತಟ್ಟಬೇಕು.

* ಇಷ್ಟೆಲ್ಲಾ ಆದಮೇಲೆ ಗ್ಯಾಸ್ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗಲು ಬಿಡಬೇಕು,ಅದರ ಮೇಲೆ ರೆಡಿ ಇರುವ ಟಿಕ್ಕಿಯನ್ನು ಹಾಕಬೇಕು ಎರಡು ಬದಿಯಲ್ಲಿ ಚೆನ್ನಾಗಿ ಬೇಯಿಸಬೇಕು.

* ಅದು ಬೆಂದ ನಂತರ ಅದರ ಮೇಲೆ ಚಾಟ್ ಮಸಾಲ,ಸ್ವಲ್ಪ ಚೀಟಿಗೆ ಹುಳಿ ಮಾವಿನ ಪುಡಿ, ಮತ್ತು ಕೊತ್ತಂಬರಿ ಸೊಪ್ಪನ್ನು    ಹಾಕಿದರೆ ಆಲೂ ಮೇತಿ ಟಿಕ್ಕಿ ಸಾಸ್ನೊಂದಿಗೆ ತಿನ್ನಲು ಸಿದ್ಧ.

ಈ ತರಹದ ಆರೋಗ್ಯಕರವಾದ ತಿನಿಸುಗಳನ್ನು ಮನೆಯಲ್ಲೇ ಮಾಡಿಕೊಳ್ಳುವುದು ಉತ್ತಮ ಆರೋಗ್ಯಕ್ಕೂ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ. ಅವಸರವಿಲ್ಲದೆ ಮನೆಯಲ್ಲಿ ನಿಧಾನವಾಗಿ ಹೊಟ್ಟೆ ತುಂಬಾ ತಿನ್ನಬಹುದು ಕುಟುಂದವರ ಪ್ರೀತಿಗೆ ಪಾತ್ರಗಬಹುದು.

LEAVE A REPLY

Please enter your comment!
Please enter your name here