ಬೇಸಿಗೆ ಬಂದರೆ ಸಾಕು ಬೆವರಿನ ಧಗೆಗೆ ಸಾಕಾಗಿಬಿಟ್ಟಿರುತ್ತದೆ. ಬಿಸಲಿನ ಧಗೆಯಿಂದ ಬಾಯಾರಿಕೆ ಆಗುವುದು ಸಹಜ. ಆದರೆ ನಾವು ಆರೋಗ್ಯದ ಕಡೆ ಗಮನವಹಿಸಬೇಕು, ಸಿಕ್ಕಲ್ಲಿ ಸಿಕ್ಕಲಿ ನೀರು ಕುಡಿಯೋವುದು,ಹೊರಗಡೆ ತಿಂಡಿ ತಿನ್ನುವುದು,ಆದಷ್ಟು ಮಟ್ಟಿಗೆ ಹಿಡಿತದಲ್ಲಿರಬೇಕು. ಮಾರ್ಕೆಟ್ನಲ್ಲಿ ಸಿಗುವ ಜ್ಯೂಸ್ ಅನ್ನು ಕುಡಿಯಬಾರದು ಇದು ತಕ್ಷಣಕ್ಕೆ ಬಾಯಾರಿಕೆ ಹೋಗಲಾಡಿಸಿದರು, ಇದರಿಂದ ದೇಹಕ್ಕೆ ತುಂಬಾನೇ ತೊಂದರೆ ಕೊಡುತ್ತದೆ. ಆದರಿಂದ ಸಾಧ್ಯವಾದಷ್ಟು ಮನೆಯಲ್ಲಿನ ಆಹಾರ ಮತ್ತು ನೀರು ಜ್ಯೂಸ್ ಮನೆಯಲ್ಲಿ ಕುಡಿಯುವುದು ಉತ್ತಮ. ಇದರಿಂದ ದೇಹಕ್ಕೆ ಶಕ್ತಿ ಮತ್ತು ನೀರಿನ ಅಂಶ ಕಾಪಾಡುತ್ತದೆ. ಬಿಸಲಿನ ದಾಹ ತೀರಿಸಿಲು ಈ ಎಳ್ಳಿನ ಜ್ಯೂಸ್ ಮಾಡಿಕೊಂಡು ಕುಡಿಯಿರಿ ಬಿಸಿಲಿನ ಬೆಗೆಗೆ ಕಡಿವಾಣ ಹಾಕಿರಿ.

ಚಳಿಗಾಲದಲ್ಲಿ  ಬೆಚ್ಚಗಿನ ವಾತಾವರಣವಿರುತ್ತದೆ, ನೀರಿನ ಬಳಕೆ ಕಡಿಮೆ ಇರುತ್ತದೆ. ಬಿಸಿ ಬಿಸಿ ಆಹಾರವು ಬೇಕು ಅನುಸುತ್ತದೆ.ಇನ್ನ ಬೇಸಿಗೆ ಕಾಲದಲ್ಲಿ ಆಹಾರದ ಬಗ್ಗೆ ಅಷ್ಟು ಗಮನ ಇರುವುದಿಲ್ಲ, ನೀರಿನ ದಾಹ ತುಂಬಾನೇ ಇರುತ್ತೆ. ಅದರಿಂದ ಸಾಧ್ಯವಾದಷ್ಟು ಮನೆಯಿಂದ ನೀರು, ಜ್ಯೂಸ್ ಅನ್ನು ತೆಗೆದುಕೊಂಡು ಹೋಗುವದನ್ನು ರೂಡಿಸಿಕೊಳ್ಳಿ. ಮನೆಯಿಂದ ಆಚೆ ಹೋಗಬೇಕಾದರೆ ಮುಖಕ್ಕೆ ಬಟ್ಟಿಯನ್ನು ಕಟ್ಟಿಕೊಂಡು ಹೋಗುವುದರಿಂದ ಮುಖದಲ್ಲಿ ಬೆವರಿನ ಗುಳ್ಳಿಗಳು ಆಗುವುದು ಕಡಿಮೆಯಾಗುತ್ತದೆ. ಮುಖದಲ್ಲಿ ಎಣ್ಣೆ ಬರುವುದು ತಕ್ಕ ಮಟ್ಟಿಗೆ ಕಡಿಮೆ ಆಗುತ್ತಾ ಬರುತ್ತೆ, ಇನ್ನ ಯಾವ ಜ್ಯೂಸ್ ಕುಡಿಬೇಕು ಯಾವ ಜ್ಯೂಸ್ ಕುಡಿಬಾರದು ಅಂತಾ ಯೋಚನೆ ಬೇಡ. ಹಣ್ಣುಗಳ ಜ್ಯೂಸ್  ಸೇವನೆ ಇರಲಿ,ಅದರ ಜೊತೆಯಲ್ಲಿ ಎಳ್ಳಿನ ಜ್ಯೂಸ್ ಕುಡಿಯಿರಿ

* ಎಳ್ಳಿನ ಜ್ಯೂಸ್ ಮಾಡಲು ಬೇಕಾಗಿರುವ ಸಾಮಗ್ರಿಗಳು

* ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು

* ಹಾಲು

* ಉಪ್ಪು

* ಬೆಲ್ಲ ಅಥವಾ ಸಕ್ಕರೆ

* ಮಾಡುವ ವಿಧಾನ

ಕಪ್ಪು ಅಥವಾ ಬಿಳಿ ಎಳ್ಳಿನ್ನು ತಣ್ಣೀರಿನಲ್ಲಿ 1 ಗಂಟೆ ನೆನಸಬೇಕು. ನಂತರ ನೆನಿಸಿದ ಎಳ್ಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಅದಕ್ಕೆ ನೀರು, ಸ್ವಲ್ಪ ಹಾಲು, ಚಿಟಿಕೆ ಉಪ್ಪು ಹಾಗು ನಿಮಗೆ ಸಕ್ಕರೆ ಇಷ್ಟವಾದರೆ ಹಾಕಿಕೊಳ್ಳಿ ಇಲ್ಲವಾದಲ್ಲಿ ಬೆಲ್ಲ ಹಾಕಿ ಒಂದು ಸಾರಿ ಮಿಕ್ಸಿ ಮಾಡಿಕೊಳ್ಳಿ. ಬೇಕಾದರೆ ಒಂದೆರಡು ಐಸ್ ಕ್ಯೂಬ್ ಹಾಕಿದರೆ ಎಳ್ಳಿನ ಜ್ಯೂಸ್ ಕುಡಿಯಲು ಸಿದ್ಧ.

ಬಿಸಿಲಿನ ದಗೆ ಕಡಿಮೆ ಮಾಡಿಕೊಳ್ಳಲು ಈ ತರಹದ ಪಾನೀಯಗಳನ್ನು ಮನೆಯಲ್ಲಿ ರೆಡಿ ಮಾಡಿಕೊಂಡು ಕುಡಿಯಿರಿ ಇದರಿಂದ ನಿಮ್ಮ ದೇಹಕ್ಕೆ ತಂಪು ನೀಡುವುದರ ಜೊತೆಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹೊರಗಿನ ಬಣ್ಣಬಣ್ಣದ ಪಾನಿಯಗಳಿಗೆ ಮರಳಾಗದೆ ಮನೆಯಲ್ಲಿ ಮಾಡಿಕೊಂಡು ಕುಡಿಯಿರಿ ನಿಮ್ಮ ಆರೋಗ್ಯವಂತಾಗಿರಿ.

ವಿ ಸೂ : ಗರ್ಭಿಣಿಯರಿಯು ಈ ಜ್ಯೂಸು ಕುಡಿಯುವ ಮುನ್ನ ವೈದ್ಯರನ್ನು ಕಾಣುವುದು ಸೂಕ್ತ ಮತ್ತು ಉಷ್ಣ ದೇಹ ಹೊಂದಿರುವವರು ಸಹ ವೈದ್ಯರನ್ನು ಕೇಳಿ ಕುಡಿಯುವುದು ಒಳ್ಳೆಯದು

LEAVE A REPLY

Please enter your comment!
Please enter your name here