ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ನುಗ್ಗೆಕಾಯಿಯನ್ನು ಇಷ್ಟ ಪಡದವರು ಅತಿ ವಿರಳ. ನುಗ್ಗೆಕಾಯಿ ಮಾತ್ರವಲ್ಲದೆ ನುಗ್ಗೆಯ ಎಲೆಗಳು ಅಂದರೆ ನುಗ್ಗೆ ಸೊಪ್ಪು ಕೂಡ ಅಷ್ಟೇ ಪ್ರಯೋಜನಕಾರಿ. ಹೇಗೆ ಅಂತೀರಾ….

ನುಗ್ಗೆ ಎಲೆಗಳಲ್ಲಿ ಆಂಟಿಆಕ್ಸಿಡೆಂಟುಗಳು ಹೆಚ್ಚಾಗಿದ್ದು ಇಂದ ಹೆಣ್ಣುಮಕ್ಕಳ ಮಾಸಿಕ ಋತುಚಕ್ರದ ಸಮಯದಲ್ಲಿ ಉಂಟಾಗುವ ಕೆಳಹೊಟ್ಟೆ ನೋವನ್ನು ನಿವಾರಿಸುವಲ್ಲಿ ಸಹಾಯಕಾರಿ.

ನೀವು ಮೂಲವ್ಯಾಧಿ ಸಮಸ್ಯೆ ಇಂದ ಬಳಲುತ್ತಿದ್ದರೆ ನುಗ್ಗೆ ಎಲೆ ಮತ್ತು ಎಕ್ಕದ ಎಲೆಗಳನ್ನು ಸಮವಾಗಿ ಬಳಸಿ ಅದರ ರಸವನ್ನು ಹಚ್ಚುವುದರಿಂದ ಮೂಲವ್ಯಾಧಿ ಇಂದ ಬರುವ ಮೊಳೆಗಳು ನಾಶವಾಗುತ್ತವೆ.

ನುಗ್ಗೆ ಎಲೆಯೆನ್ನು ಎಳ್ಳೆಣ್ಣೆ ಜೊತೆ ಸೇರಿಸಿ ಅದರ ರಸವನ್ನು ಪೆಟ್ಟುಬಿದ್ದ ಜಾಗಕ್ಕೆ ಹಚ್ಚುವುದರಿಂದ ಗಾಯ ಬೇಗನೆ ಗುಣವಾಗುತ್ತದೆ.

ನುಗ್ಗೆ ಎಲೆಯನ್ನು ನಿಯಮಿತವಾಗಿ ಅಡುಗೆಯಲ್ಲಿ ಬಳಸುವುದರಿಂದ ದೇಹಕ್ಕೆ ಬೇಕಾಗಿರುವ ಕಬ್ಬಿಣ ಅಂಶದ ಕೊರತೆ ನೀಗುತ್ತದೆ.

ನುಗ್ಗೆ ಎಲೆಗೆಯ ಕಷಾಯಕ್ಕೆ ಹುರಳಿಯ ನುಚ್ಚನ್ನು ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆಯ ಸಮಸ್ಯೆ ಬಗೆಹರಿಯುವುದು.

 

ನುಗ್ಗೆ ಸೊಪ್ಪು ಮತ್ತು ನೊಗ್ಗೆ ಕಾಯಿಯನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತದೆ. ಈ ಸೊಪ್ಪಿನ ನಿಯಮಿತ ಬಳಕೆಯಿಂದ ರಕ್ತ ಶುದ್ಧಿಯಾಗುವುದರೊಂದಿಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಿ ನಿಮಿರು ದೌರ್ಬಲ್ಯ ಸಮಸ್ಯೆ ದೂರವಾಗುತ್ತದೆ.

ನುಗ್ಗೆಯೇಲ್ಲಿರುವ ವಿಟಮಿನ್ “ಇ ” ಮತ್ತು ವಿಟಮಿನ್ “ಸಿ ” ಮೆದುಳಿನ ಜೀವಕೋಶದ ಸವೆತವನ್ನು ತಡೆದು ನೆನಪಿನ ಶಕ್ತಿಯೆನ್ನು ಹೆಚ್ಚಿಸಿ ಮರೆಗುಳಿತದಂತಹ ಸಮಸ್ಯೆಯೆನ್ನು ನಿವಾರಿಸುತ್ತದೆ.

ನುಗ್ಗೆಕಾಯಿಯೆಲ್ಲಿರುವ ಅತಿ ಹುಚ್ಚು ನಾರಿನ ಅಂಶದಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ, ಹಾಗು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುಲು ಸಹಾಯ ಮಾಡುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಸುಮಾರು 30 ಬಗೆಯ ಆಂಟಿಆಕ್ಸಿಡೆಂಟಗಳಿದ್ದು ಇವುಗಳ ಸೇವನೆಯಿಂದ ಆರೋಗ್ಯಯುತವಾದ ತ್ವಚೆ ನಿಮ್ಮದಾಗುತ್ತದೆ ಹಾಗು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here