ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲೇ ಋತುಚಕ್ರದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಮಕ್ಕಳು 8 ರಿಂದ 9 ವರ್ಷಕ್ಕೆ ಕಾಲಿಡುತ್ತಿದಂತೆ ಪೋಷಕರು ಆತಂಕಪಡುವ ಪರಿಸ್ಥಿತಿ ಹೆಚ್ಚಾಗಿದೆ. ಇದಕ್ಕೆ ಕಾರಣ ಮತ್ತು ಪರಿಹಾರ ಏನು ಅಂತೀರಾ…..

ವಯಸ್ಸಿಗೂ ಮುನ್ನವೇ ಮಕ್ಕಳು ಪ್ರೌಢಾವಸ್ಥೆಗೆ ಜಾರಲು ಅನೇಕ ಕಾರಣಗಳಿದ್ದು ಅವರ ಜೀವನ ಶೈಲಿ, ಸೇವಿಸುವ ಆಹಾರ, ಮಕ್ಕಳು ಬಳಸುವ ರಾಸಾಯನಿಕ ವಸ್ತುಗಳು ಮತ್ತು ಅವರು ಎದುರಿಸುವ ಮಾನಸಿಕ,ಬೌದ್ಧಿಕ ಒತ್ತಡ ಇವು ಪ್ರಮುಖ ಕಾರಣಗಳಾಗಿವೆ.

ನೀವು ನಿಮ್ಮ ಮಕ್ಕಳ ಬೆಳೆವಣಿಗೆಯ ಬಗ್ಗೆ ಗಮನ ವಹಿಸುವುದರ ಜೊತೆಗೆ ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹೇರಬೇಡಿ. ಮಕ್ಕಳು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದಂತೆ ಎಚ್ಚರವಹಿಸಿ.

ಮಕ್ಕಳ ಚರ್ಮದ ಆರೈಕೆಗೆ ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳನ್ನು ಬಳಸಿ ಮತ್ತು ಆದಷ್ಟು ರಾಸಾಯನಿಕ ವಸ್ತುಗಳ ಬಳಕೆಯಿಂದ ದೂರವಿರಿಸಿ.

ಮಕ್ಕಳ ಪೋಷಣೆಗೆ ಅಗತ್ಯವಿರುವ ಹಣ್ಣು ಹಾಲು ತರಕಾರಿ ಮತ್ತು ಒಣ ಹಣ್ಣುಗಳನ್ನೂ ಹೆಚ್ಚು ಉಪಯೋಗಿಸಬೇಕು.

ಮಕ್ಕಳಿಗೆ ಇಷ್ಟವಾದ ಬೇಕರಿಯ ತಿನಿಸುಗಳಿಂದ ಅವರನ್ನು ಸಾದ್ಯವಾದಷ್ಟು ದೂರವಿರಿಸಿ.

ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯಗಳ ಬದಲಾಗಿ ಮನೆಯೆಲ್ಲಿ ಹಣ್ಣಿನ ರಸವನ್ನು ತಯಾರಿಸಿಕೊಡಿ.

ಮಕ್ಕಳ ಆರೋಗ್ಯಕ್ಕಾಗಿ ದಿನವೂ ಯೋಗ ವ್ಯಾಯಾಮ ಮಾಡುವುದನ್ನು ಹೇಳಿಕೊಡಿ.

10 ವರ್ಷದ ಒಳಗಿನ ಮಕ್ಕಳುಪ್ರೌಢಾವಸ್ಥೆಗೆ ಒಳಗಾಗುವುದು ಆತಂಕಕಾರಿ ಅಂಶ. ಆದರೆ 10 ರಿಂದ 14 ವರ್ಷದ ಮಕ್ಕಳಲ್ಲಿ ಇದು ಸಹಜ, ಋತುಚಕ್ರವನ್ನು ಮುಂದೆ ಹಾಕುವುದು ಆರೋಗ್ಯದ ದೃಷ್ಟಿ ಇಂದ ಒಳ್ಳೆಯದಲ್ಲ ಇದು ಒಂದು ಪ್ರಕೃತಿದತ್ತ ಸಹಜ ಪ್ರಕ್ರಿಯೆ. ಮಕ್ಕಳೆಗೆ ಇದರಬಗ್ಗೆ ತಿಳಿ ಹೇಳಿ. ಇದರಬಗ್ಗೆ ಭಯ ಆತಂಕ ಮುಜುಗರ ಯಾವುದು ಬೇಡ.

LEAVE A REPLY

Please enter your comment!
Please enter your name here