ಸಾಮಾನ್ಯವಾಗಿ ಎಲ್ಲಾ ಕಡೆಯೆಲ್ಲೂ ಜನರು ಜ್ವರದಿಂದ ಬಳಲುತ್ತಿರುತ್ತಾರೆ. ವೈರಲ್ ಫಿವರ್ ನ ಲಕ್ಷಣಗಳನ್ನೇ “ಎಚ್1ಎನ್ 1” {ಹಂದಿ ಜ್ವರ} ಹೊಂದಿದೆ, ಆದರೆ ಇದು ವ್ಯಕ್ತಿಯ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ಸರಿಯಾದ ಸಮಕಕ್ಕೆ ಚಿಕಿತ್ಸೆ ದೊರಕದೆ ಇದ್ದರೆ , ಆ ವ್ಯಕ್ತಿಯು ಬದಕುವ ಸಾಧ್ಯತೆ ಕಡಿಮೆ ಇರುತ್ತದೆ. ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಪ್ರಾರಂಭದಲ್ಲೇ ಅನುಸರಿಸುವುದರಿಂದ ಈ ಜ್ವರದಿಂದ ರಕ್ಷಣೆ ಪಡೆಯಬಹುದು.
ಪ್ರತಿದಿನ ಖಾಲಿ ಹೊಟ್ಟೆಯೆಲ್ಲಿ ಅಮೃತ ಬಳ್ಳಿಯ ಎಲೆಗಳ್ಳನ್ನು ಸೇವಿಸುವುದರಿಂದ ಹಂದಿ ಜ್ವರ ಮಾತ್ರವಲ್ಲದೆ ಬೇರೆ ರೀತಿಯ ಸಾಮಾನ್ಯ ಜ್ವರಗಳಿಂದ ದೂರವಿರಬಹುದು.
ಲಾವಂಚದ ಬೇರನ್ನು ನೀರಿನಲ್ಲಿ ಹಾಕಿ ಕುದಿಸಿ, ಆರಿದ ನಂತರ ಕುಡಿಯುವುದರಿಂದಲೂ ಈ ಸಮಸ್ಯೆಯಿಂದ ಪಾರಾಗಬಹುದು.
ಬಿಸಿ ನೀರು ಅಥವಾ ಬಿಸಿ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯಬೇಕು, ಆಹಾರದಲ್ಲಿ ಹೆಚ್ಚು ಅರಿಶಿನದ ಬಳಕೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ ವೈರಾಣು ಮತ್ತು ನಂಜುಗಳಿಂದ ರಕ್ಷಣೆ ನೀಡುತ್ತದೆ.
ಬಿಸಿ ನೀರಿಗೆ ಜೇನು ಹಾಗು ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಗಂಟಲಿನ ಸಮಸ್ಯೆ , ಹೊಟ್ಟೆಯ ಸಮಸ್ಯೆ ಜೀರ್ಣಕ್ರಿಯೆ ಸಮಸ್ಯೆ ,
ಮತ್ತು ತಲೆ ಭಾರ, ಈ ಸಮಸ್ಯೆಗಳು ದೂರವಾಗುತ್ತದೆ.
ತುಳಸಿ ಎಲೆಗಳನ್ನು ಹಾಗೆ ತಿನ್ನುವುದು , ತುಳಸಿ ಕಷಾಯ , ತುಳಸಿ ಟೀ ಕುಡಿಯುವುದರಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಿ ಜ್ವರದಿಂದ ಮುಕ್ತಿ ಪಡೆಯಬಹುದು.
ಪರಂಗಿ [ಪಪ್ಪಾಯಿ] ಕಾಯಿಯ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚುತ್ತದೆ.
ವಿ.ಸೂ : ಹಂದಿ ಜ್ವರಯೆನ್ನುವುದು ಒಂದು ದೊಡ್ಡ ಸಮಸ್ಯೆ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಬೇಟಿಮಾಡಿ, ಚಿಕಿತ್ಸೆ ಪಡೆಯುವುದು ಒಳ್ಳೆಯದು.