ಹೌದು ಚಳಿಗಾಲ ಬಂತು ಅಂದ್ರೆ ಸಾಕು ಸಾಮಾನ್ಯವಾಗಿ ಮುಖ ಬಿರಿಯುವುದು ಕೈ ಕಾಲು ಬಿರಿಯುವುದು ಹಾಗು ಕಾಲಿನ ಹಿಮ್ಮಡಿನೂ ಸಹ ಒಡೆದು ಹೋಗುತ್ತವೆ ಅದರೊಳಗೆ ಡಸ್ಟ್ ಹೋಗಿ ನೋವು ಹಾಗುವ ಸಾಧ್ಯತೆ ಸಹ ಇರುತ್ತದೆ ಕಾರಣ ಕಾಲಿನ ಆರೋಗ್ಯದ ಕಡೆ ನಮ್ಮ ಗಮನ ತುಂಬಾ ಕಡಿಮೆ. ಅದರಲ್ಲೂ ಹಿಮ್ಮಡಿ ಒಡಕಿಗೆ ಅಗತ್ಯ ಮದ್ದು ಮಾಡುವುದಕ್ಕೆ ಅಸಡ್ಡೆ ತೋರುವವರೇ ಹೆಚ್ಚು. ಇದರ ಫಲವಾಗಿ ಬರಿಗಾಲಲ್ಲಿ ನಡೆದಾಡುವುದೇ ಕಷ್ಟವಾದ ಪರಿಸ್ಥಿತಿ ಎದುರಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡುವುದು ಸುಲಭ ಸಾಧ್ಯವಲ್ಲ.

ಇಂತಹ ಕಾಲಿನ ಆರೋಗ್ಯವನ್ನು ನೋಡಿಕೊಳ್ಳುವುದಕ್ಕೆ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಕೆಲ ಉಪಾಯಗಳು ಇಲ್ಲಿವೆ ನೋಡಿ:

ಕಾಲನ್ನು ಸ್ವಚ್ಛಗೊಳಿಸಿ: ಮೊದಲು ಹೆಚ್ಚು ನೀರು ಸೇವಿಸಿ, ಚರ್ಮದಲ್ಲಿ ತೇವಾಂಶ ಕಳೆದುಹೋಗದಂತೆ ಗಮನ ಹರಿಸಿ. ಮನೆಯಿಂದ ಹೊರ ಹೋಗಿ ಮನೆಯೊಳಗೆ ಬರುವ ವೇಳೆ ಕಾಲನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ. ದಿನ ಕಳೆದಂತೆ ಚರ್ಮದ ಮೊದಲ ಪದರ ತೇವ ಕಳೆದುಕೊಂಡು ನಿರ್ಜೀವವಾಗುತ್ತದೆ. ಸ್ಕ್ರಬ್ಬರ್‌ ಮೂಲಕ ಇವನ್ನು ತೆಗೆದು ಸ್ವಚ್ಛಗೊಳಿಸಿ. ಬಳಿಕ ಫೂಟ್‌ ಕ್ರೀಂಗಳನ್ನು ಬಳಕೆ ಮಾಡಬಹುದು.ಅಂದ ಹಾಗೆ ಕ್ರೀಂ ಬಳಕೆ ಮಾಡಿದ ಬಳಿಕ, ಸಾಕ್ಸ್‌ ಹಾಕುವುದನ್ನು ಮರೆಯದಿರಿ. ಮಲಗುವಾಗ ಸಹ ಸಾಕ್ಸ್‌ ಹಾಕಿರುವುದು ಒಳ್ಳೆಯ ಅಭ್ಯಾಸ. ಇದರಿಂದ ಒಡೆದ ಚರ್ಮಗಳು ತೇವವನ್ನು ಹೀರಿಕೊಳ್ಳಲು ಸಹಕಾರಿಯಾಗುತ್ತದೆ ಹಾಗು ಒಡೆದ ಸಮಸ್ಯೆಯಿಂದ ಬೇಗ ಮುಕ್ತಿ ಪಡೆಯುತ್ತವೆ.

ಹಿಮ್ಮಡಿ ಒಡಕಿನಿಂದ ಪಾರಾಗಿ: ಫೂಟ್‌ ಕ್ರೀಂಗಳನ್ನು ಹಚ್ಚುವ ಬದಲು ಮತ್ತೊಂದು ವಿಧಾನ ಎಂದರೆ, ಪ್ಯಾರಾಫಿನ್‌ ವಾಕ್ಸ್‌ ಹಾಗೂ ತೆಂಗಿನ ಎಣ್ಣೆಯ ಮಿಶ್ರಣವನ್ನು ನೀವು ಪ್ರತಿದಿನ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಹಚ್ಚಬೇಕು. ಬೆಳಗ್ಗೆ ಎದ್ದ ಕೂಡಲೇ ವ್ಯಾಕ್ಸ್‌ ಮಿಶ್ರಣವನ್ನು ನೀರಿನಿಂದ ತೊಳೆದುಕೊಂಡರೆ, ನೋವು ಕಡಿಮೆಯಾಗುತ್ತದೆ ಮತ್ತು ಒಡಕಿನ ಸಮಸ್ಯೆ ನಿವಾರಣೆಯಾಗುತ್ತದೆ.

ಪ್ರತಿ ದಿನ ಬೆಳಗ್ಗೆ ಹುಲ್ಲಿನಲ್ಲಿ ಕೊಂಚ ಕಾಲ ನಡೆಯುವುದು ಒಳ್ಳೆದು. ಹಾಗೆಯೇ ಆರಾಮದಾಯಕವಾಗುವ ಶೂಗಳನ್ನೂ ಹಾಕಿಕೊಳ್ಳಬೇಕು. ಹೆಚ್ಚು ಟೈಟ್‌ ಆಗುವಂತಹ ಶೂಗಳಿಂದ ಸ್ವಲ್ಪ ದಿನ ಅಂದರೆ ಒಡಕಿನ ಸಮಸ್ಯೆ ನಿವಾರಣೆಯಾಗುವ ತನಕ ದೂರವಿರಿ.

LEAVE A REPLY

Please enter your comment!
Please enter your name here