ಎಂತಹ ಗ್ಯಾಸ್ಟ್ರಿಕ್ ಸಮಸ್ಯೆ ಇದ್ರು ಬಹುಬೇಗನೆ ಮಾಯವಾಗುತ್ತೆ ಈ ಕರಿಬೇವಿನ ಪುಡಿ ಹೇಗೆ ಬಳಸಬೇಕು ಗೊತ್ತಾ ಮತ್ತು ಇದನ್ನು ಹೇಗೆ ತಯಾರಿಸಬೇಕು ಯಾವ ರೀತಿಯಾಗಿ ಅನ್ನೋದು ಇಲ್ಲಿದೆ ನೋಡಿ.

ಈ ಸಮಸ್ಯೆಗೆ ಪ್ರತಿದಿನ ಔಷಧಿ ಮಾತ್ರೆಗಳನ್ನು ಸೇವಿಸುವ ಬದಲು ನೈಸರ್ಗಿವಾಗಿ ಸಿಗುವಂತ ಕರಿಬೇವನ್ನು ಪಡೆದು ಅದರ ಉಪಯೋಗವನ್ನು ಪಡೆದುಕೊಳ್ಳುವುದು ಉತ್ತಮ.

ಕರಿಬೇವಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಕರಿಬೇವು, ಮೆಣಸಿನಕಾಳು 10 ರಿಂದ 12 , ಜೀರಿಗೆ ಎರಡು ಚಮಚ. ಹಾಗು ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು.

ತಯಾರಿಸೋದು ಹೇಗೆ.? ಒಂದು ಬಟ್ಟಲು ಕರಿಬೇವನ್ನು ತಗೆದುಕೊಂಡು ಅದನ್ನು ನೀರಿನಲ್ಲಿ ಚನ್ನಾಗಿ ತೊಳೆದು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ. ಪೂರ್ತಿಪ್ರಮಾಣದಲ್ಲಿ ಒಣಗಿದ ಮೇಲೆ ಮೇಲೆ ತಿಳಿಸಿದ ಜೀರಿಗೆ, ಕಾಳುಮೆಣಸು, ಉಪ್ಪು ಇವುಗಳನ್ನು ಕರಿಬೇವಿನ ಜೊತೆಗೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.

ಈ ಕರಿಬೇವಿನ ಪುಡಿಯನ್ನು ಊಟದ ಜೊತೆಯಲ್ಲಿ ಸೇವಿಸಬಹುದು ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪವನ್ನು ಹಾಕಿ ಕೊಂಡು ಸೇವಿಸಬಹುದು. ಒಟ್ಟಾರೆಯಾಗಿ ಈ ನೈಸರ್ಗಿಕ ಪುಡಿಯನ್ನು ಮನೆಯಲ್ಲಿ ಮಾಡಿ ಉತ್ತಮ ರೋಗ್ಯವನ್ನು ಪಡೆಯುವುದರ ಜೊತೆಗೆ ಪ್ರತಿದಿನ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಉಳಿಯಬಹುದು. ಇದನ್ನು ಇತರರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here