ವಿಠ್ಠಲ, ವಿಠ್ಠಲ ಎಂದು ನಾಮಸ್ಮರಣೆ ಮಾಡಿದರೆ ರಕ್ತದೊತ್ತಡ ಕಡಿಮೆ ಆಗಿ, ಹೃದ್ರೋಗಿಗಳ ಆರೋಗ್ಯ ನಿಯಂತ್ರಣಕ್ಕೆ ಬರುತ್ತದೆ.

ಪುಣೆಯ ವೇದ ವಿಜ್ಞಾನ ಕೇಂದ್ರ ನೂರಾರು ಹೃದ್ರೋಗಿಗಳ ಮೇಲೆ ಪ್ರಯೋಗ ಮಾಡಿ ಈ ವಿಷಯವನ್ನು ಸಾಬೀತುಪಡಿಸಿದೆ. ಈ ಕುರಿತು ಏಷಿಯನ್ ಜನರಲ್ ಆಫ್ ಕಾಪ್ಲಿಮೆಂಟರಿ ಆಂಡ್ ಆಲ್ಟರ್​ನೇಟಿವ್ ಮಿಡಿಯಾ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆ ಪ್ರಬಂಧ ಪ್ರಕಟಿಸಿದೆ. ವಿಠ್ಠಲ ಎಂಬ ನಾಮದಲ್ಲಿ ಅಪರೂಪದ ಶಕ್ತಿ ಇದೆ.

ವಿಠ್ಠಲ ನಾಮದ ಸ್ಪಂದನೆ ಅರ್ಥಾತ್ ಸ್ವರಶಾಸ್ತ್ರ್ತ್ರ ಬಗ್ಗೆಯೂ ಕೆಲ ಸಂಶೋಧನೆಗಳನ್ನು ನಡೆಸಲಾಗಿದ್ದು, ಈ ಶಬ್ದ ಉಚ್ಚರಿಸುವಾಗ ‘ಠ್ಠ’ ಎಂಬ ಅಕ್ಷರದಿಂದ ಹೊರಡುವ ಶಕ್ತಿ ನೇರವಾಗಿ ಹೃದಯದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದ ಕಂಡು ಬಂದಿದೆ.

ಎರಡು ಮಹಾಪ್ರಾಣ ಹಾಗೂ ಎರಡು ಅಲ್ಪಪ್ರಾಣ ಹೊಂದಿರುವ ಶಬ್ದವಾದ್ದರಿಂದ ಹೃದಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ವೇದ ವಿಜ್ಞಾನ ಕೇಂದ್ರ ಹೇಳಿದೆ.

ಹತ್ತು ದಿನಗಳ ಕಾಲ, ದಿನಕ್ಕೆ 9 ನಿಮಿಷದಂತೆ ಶಾಂತಚಿತ್ತದಿಂದ ವಿಠ್ಠಲ ನಾಮ ಜಪ ಮಾಡಿದರೂ ಹೈ ಬ್ಲಡ್ ಪ್ರೆಶರ್ ಸೇರಿದಂತೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ ಎಂಬುದನ್ನು ಪುಣೆಯ ವೇದ ವಿಜ್ಞಾನ ಪ್ರಯೋಗ ಕೇಂದ್ರ ಹಾಗೂ ದಿ.ಇನಾಮದಾರ್ ಹಾರ್ಟ್ ಕ್ಲಿನಿಕ್ ತಂಡಗಳು ಖಚಿತಪಡಿಸಿವೆ.

LEAVE A REPLY

Please enter your comment!
Please enter your name here