ಪಿಸ್ತಾ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ನೂರಾರು ಲಾಭವಿದೆ ಅನ್ನೋದನ್ನ ಮರೆಯಬಾರದು ಯಾಕೆಂದರೆ ನೈಸರ್ಗಿಕವಾಗಿ ಸಿಗುವಂತ ಪಿಸ್ತಾ ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ದಿನಕ್ಕೆ ಎರಡು ಮೂರೂ ಪಿಸ್ತಾ ಸೇವನೆಯಿಂದ ಯಾವೆಲ್ಲ ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಪಿಸ್ತಾದ ಆರೋಗ್ಯಾಕಾರಿ ಗುಣ ಹಾಗು ವಿಶೇಶತೆ ಏನು: ಪಿಸ್ತಾ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಕರಗುವ ನಾರನ್ನು ಹೊಂದಿರುವ ಮೂಲಕ ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ರಕ್ತದಿಂದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುತ್ತದೆ ಹಾಗೂ ಈ ಮೂಲಕ ಎದುರಾಗುವ ಹೃದಯಸ್ತಂಭನ ಮತ್ತು ಹೃದಯಾಘಾತದಿಂದಲೂ ರಕ್ಷಿಸುತ್ತದೆ.

ಪಿಸ್ತಾ ಸೇವನೆಯಿಂದ ಕಣ್ಣು, ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ದೊರಕುತ್ತದೆ ಹಾಗೂ ಈ ಮೂಲಕ ಕಣ್ಣುಗಳ ಸವೆತ (macular degeneration)ದಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ6 ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಪಿಸ್ತಾ ಸೇವನೆಯಿಂದ ಎಷ್ಟೆಲ್ಲ ಲಾಭವಿದೆ: ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ, ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ, ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ, ತಾರುಣ್ಯವನ್ನು ಕಾಪಾಡುತ್ತದೆ, ದೇಹಕ್ಕೆ ಶಕ್ತಿ ಒದಗಿಸುತ್ತದೆ

ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ, ರಕ್ತಪರಿಚಲನೆ ಉತ್ತಮಗೊಳಿಸುತ್ತದೆ, ನರವ್ಯೂಹ ವ್ಯವಸ್ಥೆ ಪಿಸ್ತಾದಲ್ಲಿರುವ ವಿಟಮಿನ್ B6 ನರವ್ಯೂಹ ವ್ಯವಸ್ಥೆಗು ಭಾರೀ ಪ್ರಯೋಜನವನ್ನುಂಟು ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here