ಹೌದು ಆಂಜನೇಯನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಕೆಲವೊಂದು ರೀತಿಯ ಆಚಾರಣೆಗಳನ್ನು ಮಾಡಿದರೆ ಹನುಮಂತನ ಕೃಪೆಗೆ ಪಾತ್ರರಾಗುತ್ತೀರಾ ಅನ್ನೋದು ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಇರುವ ನಂಬಿಕೆಯಾಗಿದೆ. ಹಾಗದ್ರೆ ನಾವು ಹನುಮಂತನ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಈ ಹನುಮನ ರೂಪಗಳನ್ನು ಪಾಲಿಸಿದರೆ ನೀವು ಹನುಮಂತನ ಕೃಪೆಗೆ ಪಾತ್ರರಾಗುತ್ತೀರ.

ಪಾದಸ್ಪರ್ಷಿ ಹನುಮಾನ್ :ನೀವು ಹನುಮಂತನ ಪಾದಸ್ಪರ್ಶಿಸಿ ಪೂಜೆ ಮಾಡಿದರೆ. ನಿಮ್ಮ ಮೇಲೆ ಹನುಮಂತನ ಕೃಪೆ ಇರುತ್ತದೆ. ಮತ್ತು ನಿಮ್ಮಲ್ಲಿರುವ ಕೆಲವೊಂದು ಸಮಸ್ಯೆಗಳು ಬಗೆಹರಿಯಲಿವೆ ಅನ್ನೋ ನಂಬಿಕೆ ಇದೆ.

ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ. ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.

ಮಹಾಬಲಿ ಹನುಮಾನ್ : ನೀವು ಮಹಾಬಲಿ ಹನುಮಾನ್ ಅನ್ನು ಆರಾಧಿಸಿದರೆ ನಿಮ್ಮಲ್ಲಿ ಶಕ್ತಿ ಮತ್ತು ಧೈರ್ಯ ಹೆಚ್ಚುತ್ತದೆ. ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿ ಆಗಿರುತ್ತಾನೆ.

ಭಕ್ತ ಹನುಮಾನ್ : ಈ ರಿಯಾಗಿ ಇರುವ ಭಕ್ತಿ ಹನುಮಾನ್ ಪೂಜಿಸಿದರೆ. ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತೆ. ಅದರಿಂದ ಈ ರೋಪವಿರುವ ಹನುಮಾನ್ ಪೂಜಿಸಿ.

ಉತ್ತರಮುಖಿ ಹನುಮಾನ್ : ಉತ್ತರ ದಿಕ್ಕಿನಲ್ಲಿರುವ ಹನುಮಂತನ ವಿಗ್ರಹಕ್ಕೆ ಪೂಜೆ ಮಾಡಿ ನಿಮ್ಮ ಸಕಲ ಕಾರ್ಯಗಳು ನೆರವೇರುತ್ತವೆ ಅನ್ನೋ ನಂಬಿಕೆ ಇದೆ.

LEAVE A REPLY

Please enter your comment!
Please enter your name here