ನಮ್ಮ ಇತ್ತೀಚಿನ ಜೀವನ ಶೈಲಿಯಿಂದಾಗಿರುವ ಆಹಾರದಲ್ಲಿನ ಬದಲಾವಣೆಯಿಂದ ಅರೋಗ್ಯ ಬಹಳಷ್ಟು ಹದಗೆಡುತ್ತಿದೆ. ಈ ಆದುನಿಕ ಆಹಾರ ಪದ್ದತಿಯಿಂದ ಹೊಟ್ಟೆ ಹುಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ನಾವು ಬಹಳಷ್ಟು ವೈದ್ಯರ ಬಳಿ ಚಿಕಿತ್ಸೆಯನ್ನ ಪಡೆದರು ಆಹಾರ ಪದ್ದತಿಯಿಂದ ಪದೇ ಪದೇ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ. ಈ ಹೊಟ್ಟೆ ಹುಣ್ಣಿಗೆ ಮನೆಯಲ್ಲಿಯೇ ಚಿಕಿತ್ಸೆಯನ್ನ ಪಡೆಯಬಹುದು.

* ಅಲ್ಯುವಿರಾ

ಅಲುವೆರಾದಲ್ಲಿ ದೇಹದ ಉಷ್ಣತೆಯನ್ನ ಕಡಿಮೆ ಮಾಡುವ ಶಕ್ತಿ ಇದೆ. ಅಲುವೆರಾದ ರಸ ತೆಗೆದು ಜ್ಯೂಸ್ ಮಾಡಿ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ, ಹೊಟ್ಟೆ ಹುಣ್ಣು ಮಾಯವಾಗುವುದು.

* ಜೇನು ತುಪ್ಪ

ಜೇನುತುಪ್ಪದಲ್ಲಿರುವ ಆರೋಗ್ಯಕರ ಗುಣಗಳು ನಿಮಗೆ ಈಗಾಗಲೇ ತಿಳಿದೇ. ಜೇನು ತುಪ್ಪ ಸಿಹಿಯಾಗಿರುವಷ್ಟೇ ಅದರ ಗುಣವೂ ಸಹ ಸಿಹಿ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶವು ಹೊಟ್ಟೆ ಹುಣ್ಣಿನಂತಹ ಸಮಸ್ಯೆಗೆ ಉತ್ತಮ ಪರಿಣಾಮವನ್ನ ನೀಡುತ್ತದೆ.

* ಎಲೆ ಕೋಸು

ಎಲೆ ಕೋಸು ಸಹ ಹೊಟ್ಟೆ ಹುಣ್ಣಿನ ಸಮಸ್ಯೆ ಇರುವವರು ಸೇವಿಸಬೇಕಾದ ಪ್ರಮುಖ ತರಕಾರಿಗಳಲ್ಲಿ ಒಂದು. ಇದು ಅಮಿನೋ ಆಸಿಡ್ ಅಂಶವನ್ನು ಬಿಡುಗಡೆ ಮಾಡುವುದರಿಂದ ಹೊಟ್ಟೆಗೆ ಸರಿಯಾಗಿ ರಕ್ತ ಪೂರೈಕೆಯಾಗುವಂತೆ ಮಾಡುವುದು.

* ಬೆಳ್ಳುಳ್ಳಿ

ಬೆಳ್ಳುಳ್ಳಿ ಹಲವು ರೋಗಗಳಿಗೆ ರಾಮಬಾಣ. ಬೆಳ್ಳುಳ್ಳಿಯನ್ನು ತಿಂದರೆ ಹೊಟ್ಟೆ ಹುಣ್ಣು ಕಡಿಮೆಯಾಗುತ್ತದೆ. ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ರಸ ತೆಗೆದು ಬೇರೆ ರೂಪದಲ್ಲಿ ಸೇವಿಸ ಬಹುದು.

LEAVE A REPLY

Please enter your comment!
Please enter your name here