ಯಾವುದೇ ಎಣ್ಣೆ ಶ್ಯಾಂಪೂ ಬಳಸಿದರೂ ಕೂದಲು ಉದುರುವುದು ಕಡಿಮೆ ಆಗುತ್ತಿಲ್ಲವೆಂದು ಚಿಂತೆ ಮಾಡಬೇಡಿ, ಈರುಳ್ಳಿ ಇದಕ್ಕೆ ಪರಿಹಾರ ನೀಡುತ್ತದೆ.

ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲ ಎಲ್ಲ ಸಮಸ್ಯೆಗಳು ಬಹುಬೇಗ ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚ ಈರುಳ್ಳಿ ರಸ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ.

ಈರುಳ್ಳಿಗೆ ಜೇನುತುಪ್ಪ ಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ.

ಜೊತೆಯಲ್ಲಿ ಇದನ್ನು ಓದಿ ನಿಮ್ಮ ಅಡುಗೆ ಮನೆಯಲ್ಲಿರುವ ಸಾಮಗ್ರಿಗಳಿಂದ ಹಲ್ಲು ನೋವನ್ನು ಶಮನ ಮಾಡಿ.

ಹಸಿ ಈರುಳ್ಳಿ : ಹಸಿ ಈರುಳ್ಳಿಯಲ್ಲಿ ಹಲ್ಲು ನೋವು ಕಡಿಮೆ ಮಾಡುವ ಔಷಧೀಯ ಗುಣಗಳಿವೆ, ಸುಮಾರು 3-4 ನಿಮಿಷಗಳ ಕಾಲ ಈರುಳ್ಳಿಯನ್ನು ಜಗಿಯಬೇಕು, ಅದೂ ಕಷ್ಟವಾದರೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮೇಲೆ ಇರಿಸಿಕೊಳ್ಳಿ, ಇದರಿಂದ ತಕ್ಕಮಟ್ಟಿಗೆ ನೋವು ಕಡಿಮೆ ಆಗುತ್ತದೆ.

ಲವಂಗದೆಣ್ಣೆ : ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿರುವ ಲವಂಗ ಹಲ್ಲು ನೋವು ನಿವಾರಣೆಗೆ ಒಳ್ಳೆಯ ಔಷಧ, ಲವಂಗದ ಎಣ್ಣೆಯನ್ನು ನೋವಿರುವ ಹಲ್ಲಿನ ಮೇಲೆ ಹಾಕಿ, ಎಣ್ಣೆ ಒಸಡಿನ ಮೇಲೆ ಬೀಳದ ಹಾಗೆ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಒಸಡು ಉರಿಯುತ್ತದೆ, ಒಂದು ವೇಳೆ ಬಿದ್ದರೂ ಉರಿ ಹೆಚ್ಚು ಸಮಯ ಇರುವುದಿಲ್ಲ, ಕೆಲ ನಿಮಿಷಗಳಲ್ಲಿ ಸರಿಹೋಗುತ್ತದೆ.

ಕಾಳು ಮೆಣಸು : ಕಾಳು ಮೆಣಸನ್ನು ನೋವಿರುವ ಜಾಗದಲ್ಲಿ ಉಜ್ಜಿಕೊಳ್ಳುವುದರಿಂದ ಆ ಜಾಗ ಬೆಂಡಿನಂತಾಗಿ ನೋವು ಮಾಯವಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here