ವಾತಾವರಣದಲ್ಲಿ ಧೂಳು, ಪ್ರಧೂಷಣೆಯಿಂದಾಗಿ ಮಹಿಳೆಯರು ಅವರ ಸೌಂದರ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಆದರೆ ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಅದು ಸ್ವಲ್ಪ ಕಷ್ಟಕರವಾಗಿದೆ ಆದರೆ ಸಮಯದ ಉಳಿತಾಯದೊಂದಿಗೆ ಹಣವನ್ನ ಉಳಿಸಿ ನಮ್ಮ ಸೌಂದರ್ಯವನ್ನ ಕಾಪಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೂ ಎಲ್ಲರಲ್ಲಿಯೂ ಕಾಡುತ್ತಿರುತ್ತದೆ.

ನಾವು ನಮ್ಮ ಸೌಂದರ್ಯದ ಕಾಳಜಿಯಲ್ಲಿ ಮೊದಲನೇ ಸ್ಥಾನ ನೀಡುವುದು ಕೇಶ ರಾಶಿಗೆ, ಹೌದು ಹದಗೆಟ್ಟಿರುವ ವಾತಾವರಣದಿಂದಾಗಿ ಕೂದಲು ಉದುರುವಿಕೆ, ಸಿಲುಕುದಲು, ಒಣ ಕೂದಲು, ವಯಸ್ಸಾಗಕ್ಕೂ ಮುನ್ನ ಬೆಳ್ಳಗಾಗುವುದು, ಹೀಗೆ ಕೂದಲಿನ ಹತ್ತಾರು ಸಮಸ್ಸೆಗಳು ನಮ್ಮನ್ನ ಕಾಡುತ್ತಿರುತ್ತವೆ, ಇವುಗಳೆಲ್ಲದಕ್ಕೂ ಸುಲಭವಾಗಿ ಸಿಗುವ ಕರಿಬೇವಿನಲ್ಲಿ ಪರಿಹಾರವಿದೆ.

ಕರಿಬೇವಿನಲ್ಲಿ ಹೆಚ್ಚಿನ ವಿಟಮಿನ್ ಗಳು ಇರುವುದರಿಂದ ಇದು ನಮ್ಮ ಇಹಕ್ಕೂ, ಸೌಂದರ್ಯಕ್ಕೂ ಬಹಳ ಉಪಯುಕ್ತಕಾರಿ, ಕೂದಲಿಗೆ ಬೇಕಾದಂತಹ ಪೋಷಕಾಂಶಗಳು ಕರಿಬೇವಿನಲ್ಲಿವೆ, ಕರಿಬೇವಿನಿಂದ ಎಣ್ಣೆಯನ್ನ ತಯಾರಿಸಿ ಕೂದಲಿಗೆ ಹಚ್ಚಬೇಕು.

ಕರಿಬೇವನ್ನು ಜಜ್ಜಿ ರಸ ತೆಗೆಯ ಬೇಕು, ನಾಲ್ಕು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ಕರಿಬೇವಿನ ರಸ ಹಾಕಿ ಒಲೆಯ ಮೇಲಿಟ್ಟು ಕಾಯಿಸ ಬೇಕು, ( ನೀರಿನಂಶ ಹೋಗುವ ವರೆಗೆ ) ತಯಾರಿಸಿದ ಎಣ್ಣೆಯನ್ನು ತಿಂಗಳವರೆಗೆ ಇಡಬಹುದು, ಎಣ್ಣೆ ಆರಿದ ನಂತರ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳ ಬೇಕು.

ಒಂದೆರಡು ತಾಸಿನ ನಂತರ ಕೂದಲನ್ನ ತೊಳೆಯಬೇಕು, ಹೀಗೆ ವಾರಕ್ಕೆ ಎರಡರಿಂದ ಮೂರೂ ಭಾರಿ ಮಾಡುವುದರಿಂದ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.

ಜೊತೆಯಲ್ಲಿ ಇದನ್ನು ಓದಿ ಮಹಿಳೆಯರಲ್ಲಿ ಕಾಡುವ ಬಿಳಿ ಸೆರಗು ಸಮಸ್ಯೆಗೆ ಇಲ್ಲಿದೆ ಮನೆ ಮದ್ದು.

ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದ ಮಹಿಳೆಯರಲ್ಲೂ ಬಿಳಿ ಸೆರಗು ( ವಾಯ್ಟ್ ಬ್ಲೇಡ್ ) ಹೆಚ್ಚಾಗಿ ಕಂಡುಬರುತ್ತಿದೆ, ಇದನ್ನ ತಡೆಗಟ್ಟಲು ಹಲವಾರು ವೈದ್ಯರಲ್ಲಿ ಚಿಕಿತ್ಸೆ ಪಡೆದರು ಸಹ ಈ ಸಮಸ್ಸೆಯಿಂದ ಮುಕ್ತಿಸಿಗುತ್ತಿಲ್ಲವಲ್ಲ ಎಂಬುದು ಹೆಚ್ಚಿನ ಜನರಲ್ಲಿ ಗೊಂದಲವನ್ನುಂಟು ಮಾಡಿದೆ. ಈ ಬಿಳಿಸೆರಗಿನಿಂದಾಗಿ ಮಹಿಳೆಯರು ಬಹಳ ತೊಂದರೆ ಅನುಭವಿಸುತ್ತಾರೆ, ಇದರಿಂದ ಸೊಂಟ ನೋವು, ಬೆನ್ನು ನೋವು, ನಿಶಕ್ತಿ, ಬೇಗ ಆಯಾಸವಾಗುವುದು, ಸರ್ವ ರೋಗಕ್ಕೂ ಮನೆಯಲ್ಲಿದೆ ಮದ್ದು ಎಂಬಂತೆ ಇದನ್ನ ತಡೆಗಟ್ಟಲು ಸಹ ಮನೆಮದ್ದು ಇದೆ.

ಏಲಕ್ಕಿ ಬಾಳೆ ಹಣ್ಣಿನ ಜೊತೆಗೆ ಚಕ್ಕೆ ಪುಡಿಯನ್ನ ಸೇರಿಸಿ ಪ್ರತಿ ದಿನ ಸೇವಿಸ ಬೇಕು.

ಅಕ್ಕಿ ತೊಳೆದ ನೀರನ್ನ ದಿನಕ್ಕೆ ಮೂರೂ ಭಾರಿ ಕುಡಿಯ ಬೇಕು. ( ಉಪ್ಪು ಹಾಕಬೇಡಿ )

ಬಿಳಿ ದಾಸವಾಳದ ಹೂವಿನ ದಳಗಳನ್ನ ತಿನ್ನಬೇಕು.

ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಊಟ ಮಾಡುವ ಸಮಯದಲ್ಲಿ ವ್ಯತ್ಯಾಸವಾದರೆ ಬಿಳಿ ಸೆರಗು ಹೆಚ್ಚಾಗಿ ಕಂಡುಬರುತ್ತದೆ.

ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳನ್ನ ಸೇವಿಸ ಬೇಕು.( ಪಪ್ಪಾಯ, ಕಿವಿ ಹಣ್ಣು,)

ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here