ಹೌದು ಪ್ರತಿಯೊಬ್ಬರ ಮನೆಯಲ್ಲೂ ಈ ಎಣ್ಣೆ ಇದ್ದೆ ಇರುತದ್ದೇ ಅದು ಯಾವುದು ಅಂತೀರಾ? ಮುಂದೆ ತಿಳಿಸುತ್ತೇವೆ ನೋಡಿ, ಹರಳೆ ಎಣ್ಣೆ ಎಲ್ಲರಿಗು ಗೊತ್ತಿರುವಂತದ್ದು ಇದರಿಂದ ಹಲವು ಬೇನೆಗಳನ್ನು ನಿವಾರಿಸಬಹುದು ಎಂದರೆ ನಂಬುತ್ತೀರಾ? ನಂಬಲೇಬೇಕು. ಆಯುರ್ವೇದದ ಪ್ರಕಾರ ಈ ಎಣ್ಣೆ ಕೆಲವೊಂದು ಬೇನೆಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತೆ.

೧ ನಿಮ್ಮಲ್ಲಿ ಸೊಂಟ ನೋವು ಹಾಗು ಮಂಡಿ ನೋವು ಕಾಣಿಸಿಕೊಂಡರೆ ಈ ಎಣ್ಣೆ ಸಹಕಾರಿಯಾಗಿದೆ. ಹಾಗು ವಾರಕ್ಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.

೨ ಹೊಟ್ಟೆ ಗುಡುಗುಡು ಸದ್ದು ಬಂದರೆ ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿ.

೩ ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡಿ.

೪ ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.

೫ ಹರಳೆಣ್ಣೆಯಿಂದ ಆಗಾಗ ಮಸಾಜ್ ಮಾಡಿ, ವೃದ್ದಾಪವನ್ನು ದೂರಗೊಳಿಸಬಹುದು.

೬ ಕಿವಿ ಮೊರೆತ ತೊಂದರೆ ಇದ್ದರೆ ಒಂದು ತಿಂಗಳ ಕಾಲ, ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ.

೭ ಕೂದಲ ಬೆಳವಣಿಗೆಗೆ ಶಾಂಪೂ ಬಳಸುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ 20 ನಿಮಿಷಗಳ ಬಳಿಕ ಶಾಂಪೂ ಹಾಕಿ ತೊಳೆ.

ಜೊತೆಯಲ್ಲಿ ಇದನ್ನು ಓದಿ ಮಹಿಳೆಯರ ಸುಂದರ ತ್ವಚೆಗೆ ಕೆಲವು ಟಿಪ್ಸ್.

ಮಹಿಳೆಯರು ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಕ್ಯತೆಯನ್ನ ನೀಡುತ್ತಾರೆ. ಅಂತವರಿಗೆ ಇಲ್ಲಿವೆ ಸುಲಭ ಹಾಗೂ ಸಿಂಪಲ್ ಟಿಪ್ಸ್

ಕಡಲೆ ಬೆಳೆ ಹಿಟ್ಟಿಗೆ ಸ್ವಲ್ಪ ಹಾಲು ಬೆರಸಿ ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ತೊಳೆದರೆ ಮುಖವು ಸುಂದರ ಹಾಗೂ
ಕೋಮಲವಾಗುತ್ತದೆ.

ಹಸಿ ಹಾಲನ್ನ (ಕಾಯಿಸದೆ ಇರುವ ಹಾಲು) ಕೈ, ಕಾಲುಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡುವುದರಿಂದ ಬಿಸಿಲಿಗೆ ಕೈ, ಕಾಲುಗಳು ಕಪ್ಪಾಗಿದ್ದರೆ ನಿಧಾನವಾಗಿ ಬೆಳ್ಳಗಾಗುತ್ತವೆ.

ಟೊಮೊಟೊ ಹಣ್ಣಿನ ರಸವನ್ನ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಮೊಡವೆಯ ಕಲೆಗಳು ಮಾಯವಾಗುತ್ತವೆ.

ಪಪ್ಪಾಯ ಹಣ್ಣನ್ನ ಸಿಪ್ಪೆ ತೆಗೆದು ಮುಖಕ್ಕೆ ಪ್ಯಾಕ್ ಹಾಕಿಕೊಂಡರೆ ಮುಖವು ಕಾಂತಿಯಿತವಾಗಿ ಕಾಣುತ್ತದೆ.

ಬಾಳೆ ಹಣ್ಣನ ಸಿಪ್ಪೆ ತೆಗೆದು ಅದಕ್ಕೆ ಜೇನು ತುಪ್ಪ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ನೆರಿಗೆಗಳು ಕಡಿಮೆಯಾಗುತ್ತವೆ.

ಬಟಾಣಿಯನ್ನು ಪುಡಿ ಮಾಡಿ, ಪುಡಿಮಾಡಿದ ಹಿಟ್ಟಿಗೆ ಸ್ವಲ್ಪ ಹಾಲು ಸೇರಿಸಿ ಪ್ಯಾಕ್ ತಯಾರಿಸಿ, ಇದನ್ನ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚುವುದರಿಂದ ಮುಖವು ಕಾಂತಿಯುತ ಹಾಗೂ ಮೃದುವಾಗುತ್ತದೆ.

ಹಿಮ್ಮಡಿ ಒಡೆದು ಬಿರುಕು ಬಿಟ್ಟಿದ್ದಾರೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು,ಸೋಡಾ, ಹಾಗೂ ನಿಂಬೆ ರಸವನ್ನ ಬೆರೆಸಿ ೨೦ ನಿಮಿಷಗಳ ಕಾಲ ಕಾಲನ್ನ ನೀರಿನಲ್ಲಿ ಇಟ್ಟುಕೊಂಡರೆ ಹಿಮ್ಮಡಿ ಕೋಮಲವಾಗುತ್ತವೆ.

ಆಲಿವ್ ಎಣ್ಣೆಯನ್ನ ಪ್ರತಿ ದಿನ ಮಲಗುವ ಮುನ್ನ ತುಟಿಗಳಿಗೆ ಹಚ್ಚಿ ಮಲಗುವುದರಿಂದ ತುಟಿಗಳು ನಯವಾಗುತ್ತವೆ.

LEAVE A REPLY

Please enter your comment!
Please enter your name here