ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು, ಹಾಗೆಂದು ಹಸಿ ಹುಲ್ಲನ್ನೇ ತಿನ್ನಬೇಕಾಗಿಲ್ಲ ಏನು ಮಾಡ ಬಹುದು ನೋಡೋಣ.

ಬೇರೆ ಬೇರೆ ತೊಂದರೆಗಳಿಗೆ ನಾವು ಡಾಕ್ಟರ್ ಹೇಳಿದ ಮಾತ್ರೆಯನ್ನು ತೆಗೆದು ಕೊಂಡಿರುತ್ತೇವೆ, ಖಾಯಿಲೆ ವಾಸಿಯಾದರೂ ಮಾತ್ರೆಯ ಅಡ್ಡ ಪರಿಣಾಮ ಸ್ವಲ್ಪವಾದರೂ ಕಂಡುಬರುತ್ತದೆ ಇಂತಹ ಸಮಯದಲ್ಲಿ ಒಂದು ಹಿಡಿ ಗರಿಕೆಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಆ ನೀರು ಸ್ವಲ್ಪ ಬತ್ತುವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿದರೆ ಹಳೆಯ ಔಷಧಿಗಳ ಅವಶೇಷಗಳೆಲ್ಲ ಶರೀರದಿಂದ ಮಾಯ ವಾಗುತ್ತದೆ, ಒಂದು ತಿಂಗಳವರೆಗೆ ಈ ಕಷಾಯವನ್ನು ಕುಡಿಯ ಬೇಕಾಗುತ್ತದೆ.

ಗರಿಕೆ ಮತ್ತು ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಆ ಕಷಾಯವನ್ನು ಕುಡಿದರೆ ವಾಯುವಿನಿಂದಾಗುವ ಬೆನ್ನು ಮತ್ತು ಸೊಂಟ ನೋವು ಕಡಿಮೆಯಾಗುತ್ತದೆ, ಈ ಕಷಾಯವನ್ನು ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಗಳು, ಹಸಿವಿಲ್ಲದಿರುವುದು ಎಲ್ಲದಕ್ಕೂ ಒಳ್ಳೆಯದು ಅನಗತ್ಯ ಕೊಲೆಸ್ಟರಾಲ್ ಕೂಡಾ ಕಡಿಮೆಯಾಗುತ್ತದೆ.

ತೆಂಗಿನ ಎಣ್ಣೆಯಲ್ಲಿ ಗರಿಕೆಯನ್ನು ಕುದಿಸಿ ಆರಿಸಿ ತಲೆಗೆ ಹಚ್ಚಿದರೆ, ಶರೀರದ ಉಷ್ಣ ದಿಂದಾಗುವ ತಲೆ ಹೊಟ್ಟು ಕಡಿಮೆಯಾಗುವುದು.

ಜೊತೆಯಲ್ಲಿ ಇದನ್ನು ಓದಿ ತೊಂಡೆಕಾಯಿ ಸೇವಿಸುವುದರಿಂದ ಎಷ್ಟೆಲ್ಲ ಅನುಕೂಲಗಳಿವೆ ಎಂಬುದು ನಿಮಗೆ ಗೊತ್ತೇ?

ತೊಂಡೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಜೀವಸತ್ವ ಮತ್ತು ಖನಿಜಾಂಶ ಹೇರಳವಾಗಿದೆ. ಇಂಗ್ಲಿಷ್ ನಲ್ಲಿ ಇದನ್ನು ‘ಕೋಕಿನಿಯಾ ಗ್ರಾಂಡಿಸ್’ ಅಥವಾ ಬೇಬಿ ವಾಟೆರ್ಮೆಲೋನ್ ಎಂದು ಕೂಡ ಕರೆಯಲ್ಪಡುತ್ತದೆ. ಪ್ರೋಟೀನ್ ಮತ್ತು ನಾರಿನಂಶ ಕೂಡ ಈ ತರಕಾರಿಯಲ್ಲಿ ಹೇರಳವಾಗಿದ್ದಲ್ಲದೆ ವಿರೇಚಕ ಗುಣಗಳಿರುವ ಈ ತರಕಾರಿ ಕರುಳಿನ ಆರೋಗ್ಯಕ್ಕೆ ಉತ್ತಮ.

ಪ್ರತಿ ೧೦೦ ಗ್ರಾಂ ತೊಂಡೆಕಾಯಿಯಲ್ಲಿ ೧.೪ ಎಂ.ಜಿ ಅಷ್ಟು ಕಬ್ಬಿನಾಂಶ ವಿರುತ್ತೆ. ೧.೬ ಗ್ರಾಮ್ಸ್ ನಷ್ಟು ಡೈಯೆಟರಿ ಫೈಬರ್ (ನಾರಿನಂಶ), ೦.೦೭ ಎಂ.ಜಿ ಅಷ್ಟು ಜೀವಸತ್ವ (ವಿಟಮಿನ್), ೪೦ ಗ್ರಾಂ ನಷ್ಟು ಕ್ಯಾಲ್ಸಿಯಂ ಇದೆ.

ಈ ತರಕಾರಿಯಲ್ಲಿ ವಿಟಮಿನ್ ‘ಸಿ’ ಮತ್ತು ಬೀಟಾ ಕೆರೋಟಿನ್ ಹೆಚ್ಚಾಗುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟುವ ಸಾಮರ್ಥ್ಯವಿದೆ.

ತೊಂಡೆಕಾಯಿಯನ್ನು ನಿಮ್ಮ ನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಯಕೃತ್ತನ್ನು ನಿರ್ವಿಶೀಕರಣ (detoxification of liver) ಮಾಡಬಹುದು. ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚು ಮಾಡಿ ರಕ್ತ ದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣ ದಲ್ಲಿಡಲು ಉಪಯುಕ್ತವಾಗಿದೆ.

ಈಗಾಗಲೇ ಹೇಳಿರು ವಂತೆ ತೊಂಡೆ ಕಾಯಿಯಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುವುದರಿಂದ ಕಿಡ್ನಿಯಲ್ಲಿ ಕಂಡು ಬರುವ ಕಲ್ಲುಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿ.

ಪೊಟ್ಯಾಸಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ನಿಮ್ಮ ಹೃದಯದ ಆರೋಗ್ಯಕ್ಕೆ ಇದು ಸಹಕಾರಿ.

ವಿಟಮಿನ್ ಸಿ, ವಿಟಮಿನ್ ಬಿ೨, ವಿಟಮಿನ್ ಬಿ ೩ ಹೇರಳವಾಗಿರುವ ತೊಂಡೆಕಾಯಿಯು ನಮ್ಮ ರಕ್ತ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

LEAVE A REPLY

Please enter your comment!
Please enter your name here