ನಿಮಗೆ ಸುಲಭವಾಗಿ ಸಿಗುವಂತ ನೆಲ್ಲಿಕಾಯಿಯಲ್ಲಿದೆ ಹಲವು ಆರೋಗ್ಯಕಾರಿ ಅಂಶಗಳು ನೆಲ್ಲಿಕಾಯಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಉತ್ತಮ ಆರೋಗ್ಯಕ್ಕೆ ತುಂಬಾನೇ ಸಹಕಾರಿಯಾಗಿದೆ. ನಮ್ಮನ್ನು ಬಾಧಿಸುವ ಕೆಲವು ಕಾಯಿಲೆಗಳಿಗೆ ನೆಲ್ಲಿಕಾಯಿ ರಾಮಬಾಣವಾಗಿದೆ. ಹಿಂದಿನ ಕಾಲದಲ್ಲಿ ಇದರ ಮಹತ್ವ ಅರಿತ ಹಿರಿಯರು ಕಾಡಿನಲ್ಲಿ ಹೇರಳವಾಗಿ ಸಿಗುತ್ತಿದ್ದ ನೆಲ್ಲಿಕಾಯಿಯನ್ನು ತಂದು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಿದ್ದರು. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಲು ಹಾಗು ಚರ್ಮದ ಕಾಂತಿಯುತ ಬೆಳವಣಿಗೆಗೆ ನೆಲ್ಲಿಕಾಯಿ ಪ್ರಯೋಜನಕಾರಿ. ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆ ಹೋಗಲಾಡಿಸಲು ನೆಲ್ಲಿಕಾಯಿಯ ರಸವನ್ನು ಹಚ್ಚಬೇಕು.ಆಗೆಯೇ ತಲೆಯ ಹೊಟ್ಟು, ಬಿಳಿಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ತಲೆಗೆ ಹಚ್ಚುತ್ತಾ ಬರಬೇಕು. ಕಾಂತಿಯುತ ತಲೆಗೂದಲು ಬೆಳೆಯಲು ಸಹಕಾರಿ.

ನೆಲ್ಲಿಕಾಯಿಯಿಂದ ತಯಾರಿಸಿದ ಎಣ್ಣೆಯನ್ನು ಹಚ್ಚುತ್ತಾ ಬಂದರೆ ತಂಪಾಗಿರುತ್ತದೆ ಜತೆಗೆ ಕೂದಲೂ ಚೆನ್ನಾಗಿ ಬೆಳೆಯುತ್ತದೆ. ಜೀರ್ಣಕ್ರಿಯೆಗೆ ನೆಲ್ಲಿಕಾಯಿ ಉತ್ತಮವಾಗಿರುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಉಪಕಾರಿ. ರಕ್ತವನ್ನು ಶುದ್ಧಿ ಮಾಡುತ್ತದೆ.ಮುಖದ ಮೇಲಿನ ಮೊಡವೆ ನಿವಾರಣೆಗೂ ನೆಲ್ಲಿಕಾಯಿ ಪ್ರಯೋಜನಕಾರಿ.

ನೆಲ್ಲಿ ಗಿಡದ ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅಜೀರ್ಣ, ಹೊಟ್ಟೆನೋವಿನ ಔಷಧಿಯಾಗಿ ಬಳಸಬಹುದು. ನೆಲ್ಲಿಯನ್ನು ಕತ್ತರಿಸಿ ಸಕ್ಕರೆ ಪಾಕದಲ್ಲಿ ಮಿಶ್ರಣ ಮಾಡಿ ಬಿಸಿಲಿನಲ್ಲಿ ಒಣಗಿಸಿಕೊಂಡರೆ ತಿನ್ನಲು ರುಚಿ.

ದೇಹ ಆಯಾಸದಿಂದ ಬಳಲುತ್ತಿದ್ದರೆ ನೆಲ್ಲಿಕಾಯಿ ರಸಕ್ಕೆ ಏಲಕ್ಕಿಪುಡಿ, ಸಕ್ಕರೆ ಹಾಕಿ ಜ್ಯೂಸ್ ತಯಾರಿಸಿ ಕುಡಿದರೆ ಸುಸ್ತು ಪರಿಹಾರವಾಗುತ್ತದೆ. ನೆಲ್ಲಿಕಾಯಿಯನ್ನು ಬೇಯಿಸಿ ಉಪ್ಪಲ್ಲಿ ಹಾಕಿಟ್ಟುಕೊಂಡರೆ ಉಪ್ಪಿನಕಾಯಿಯಂತೆ ಹಾಗೂ ಅದರಿಂದ ಪದಾರ್ಥವನ್ನೂ ತಯಾರಿಸಬಹುದು.

ಜೊತೆಯಲ್ಲಿ ಇದನ್ನು ಓದಿ ಮೆಕ್ಕೆಜೋಳದ ರೇಷ್ಮೆಯ ಬಗ್ಗೆ ನಿಮಗೆಷ್ಟು ಗೊತ್ತು.

ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುತ್ತದೆ : ಮೆಕ್ಕೆಜೋಳದ ರೇಷ್ಮೆಯು ಕಿಡ್ನಿಯ ಕಲ್ಲನ್ನು ಕರಗಿಸುವುದರಲ್ಲಿ ಸಹಾಯಕವಾಗುತ್ತದೆ, ನಿಯಮಿತ ಮೆಕ್ಕೆಜೋಳ ರೇಷ್ಮೆ ಸೇವನೆಯು ಕಿಡ್ನಿಯಲ್ಲಿನ ಕಲ್ಲು ಹಾಗೂ ಮುಂದೆ ಉತ್ಪಾದನೆಯಾಗುವುದನ್ನು ತಡೆಯುತ್ತದೆ

ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಿಕೆ : ಮೆಕ್ಕೆಜೋಳದ ರೇಷ್ಮೆಯು ಅತಿಯಾಗಿ ವಿಟಮಿನ್ K ನ್ನು ಹೊಂದಿದ್ದು ರಕ್ತಹೆಪ್ಪುಗಟ್ಟುವುದನ್ನು ತಡೆಯುವುದರಲ್ಲಿ ಪರಿಣಾಮಕಾರಿಯಾಗಿದ್ದು ಹಾಗೂ ರಕ್ತಕ್ಷಯವನ್ನು ತಡೆಯುವುದರಲ್ಲಿಯೂ ಸಹಕಾರಿಯಾಗಿದೆ.

ಮಧುಮೇಹ ಹತೋಟಿ : ಮೆಕ್ಕೆಜೋಳದ ರೇಷ್ಮೆಯು ದೇಹದಲ್ಲಿರುವ ಇನ್ಸುಲಿನ್ ಹಾಗೂ ಅನಾರೋಗ್ಯಕರ ಜೀವಕೋಶಗಳನ್ನು ಸರಿಮಾಡುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಈ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುವಂತೆ ಮಾಡುತ್ತದೆ

ನೈಸರ್ಗಿಕ ಮೂತ್ರವರ್ಧಕ : ಮೆಕ್ಕೆಜೋಳದ ರೇಷ್ಮೆಯನ್ನು ನಿಯಮಿತವಾಗಿ ಬಳಸಿದರೆ ದೇಹದಿಂದ ಬೇಡವಾದ ತ್ಯಾಜ್ಯ ಹಾಗೂ ಲವಣಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೊತೆಗೆ ಮೂತ್ರ ತೊಂದರೆಯನ್ನು ತಡೆಯುತ್ತದೆ.

ಮೆಕ್ಕೆಜೋಳದ ರೇಷ್ಮೆ ಸೇವನೆ ಹೇಗೆ? : ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು

ಸೂಚನೆ: ಗರ್ಭಿಣಿಯರು ಇದನ್ನು ಬಳಸಬಾರದು

LEAVE A REPLY

Please enter your comment!
Please enter your name here