ಪ್ರತಿ ತಿಂಗಳು ಮಹಿಳೆಯರು ಋತುಮತಿಯಾಗೋದು ಸಾಮಾನ್ಯವಾದ ಸಂಗತಿ, ಇದು ಎಲ್ಲ ಮಹಿಳೆಯರಲ್ಲೂ ಕಡ್ಡಾಯವಾಗಿ ನಡೆಯಲೇಬೇಕು ಸಂಗತಿ, ಆದ್ರೆ ಈ ತಿಂಗಳ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಹೇಳತೀರದು, ಹೊಟ್ಟೆಯ ಕೆಳಭಾಗದಲ್ಲಾಗುವ ಈ ಕ್ರಿಯೆಯಿಂದ ಸ್ನಾಯು ಸೆಳೆತ ಉಂಟಾಗಿ ನಿಶ್ಯಕ್ತಿ ಉಂಟಾಗುತ್ತೆ, ಇದರಿಂದ ಮಹಿಳೆಯರಿಗೆ ಬೇರೆ ಕೆಲಸ ಮಾಡೋಕೆ ಕಷ್ಟವಾಗುವ ಸಂಭವವು ಹೆಚ್ಚಿದೆ, ಮುಟ್ಟಾಗುವ ಸಂದರ್ಭ್ದಲ್ಲಿ ಮಹಿಳೆಯರಲ್ಲಿ ನೋವಿ ಕಾಣಿಸಿಕೊಳ್ಳೋಕೆ ಮುಖ್ಯ ಕಾರಣ ಆಮ್ಲಜನಕದ ಕೊರತೆ, ಮಹಿಳೆಯರ ಜನನಾಂಗದ ಸಮೀಪದಲ್ಲಿರುವ ರಕ್ತನಾಳಗಳಿಗೆ ಆಮ್ಲಜನಕ ಸರಿಯಾಗಿ ಪೊರೈಕೆಯಾಗದೆ ಇರುವುದರಿಂದ ಈ ನೋವು ಕಾಣಿಸಿಕೊಳ್ಳುತ್ತೆ, ಈ ವೇಳೆ ಬಹಳಷ್ಟು ಮಹಿಳೆಯರು ನೋವು ತಡೆಯಲು ಮಾತ್ರೆಗಳ ಬಳಕೆ ಮಾಡುತ್ತಾರೆ ಆದರೆ ಆದರ ಬದಲು ಒಮ್ಮೆ ಈ ಮನೆ ಮದ್ದನ್ನು ಉಪಯೋಗಿಸಿ ನೋಡಿ.

ಬೇಕಾಗುವ ಪದಾರ್ಥಗಳು

* ಕುಂಬಳಕಾಯಿ ಬೀಜ – ೧ ಚಮಚ
* ಬಾಳೆಹಣ್ಣು – ಅರ್ಧ
* ಹಾಲು – ಒಂದು ಲೋಟ

ಮಾಡುವ ವಿಧಾನ

ಒಂದು ಚಮಚ ಕುಂಬಳಕಾಯಿ ಬೀಜಕ್ಕೆ ಅರ್ಧ ಬಾಳೆಹಣ್ಣು ಹಾಕಿ ಸ್ವಲ್ಪ ಪ್ರಮಾಣದ ಹಾಲಿನೊಂದಿಗೆ ಮಿಕ್ಸಿಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ, ಇದನ್ನು ಒಂದು ಕಪ್ ಗೆ ಹಾಕಿಕೊಂಡು ಮುಟ್ಟದ ದಿನ ಉಪಹಾರದ ಬಾಳೆಕ ಸೇವಿಸಿ, ಕೊಂಬಳಕಾಯಿ ಬೀಜದಲ್ಲಿ ಪ್ರಾಸ್ಪರಸ್ ಸತು ಇರುವುದರಿಂದ ಜನನಾಂಗದಲ್ಲಾಗುವ ಉರಿಯೂತ ಕಡಿಮೆ ಮಾಡಿ ಸ್ನಾಯುಸೆಳೆತ ಕಡಿಮೆ ಮಾಡುತ್ತೆ, ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹೆಚ್ಚು ಇರುವುದರಿಂದ ಇದು ಸ್ನಾಯು ಸೆಳೆತಕ್ಕೆ ರಾಮಬಾಣ, ಇನ್ನು ಈ ಮನೆ ಮದ್ದು ಸೇವಿಸುವ ಸಂದರ್ಭದಲ್ಲಿ ಕರ ಪದಾರ್ತಗಳನ್ನು ಸೇವಿಸದಿರುವುದು ಉತ್ತಮ ಅಲ್ಲದೆ ಸ್ವಲ್ಪ ವ್ಯಾಯಾಮ ಮಾಡೋದು ಮುಟ್ಟಿನ ನೋವು ಕಡಿಮೆ ಮಾಡಲು ಸಹಕಾರಿಯಾಗುತ್ತೆ.

LEAVE A REPLY

Please enter your comment!
Please enter your name here