ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ, ಇದು ಎಲ್ಲರೂ ಮಾಡುವುದೇ ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ, ಪ್ರಾಯದಲ್ಲಿ ತೊಂದರೆ ಮಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಮೊಡವೆಗಳು, ಮುಖದ ಅಂದವನ್ನು ಹಾಳುಮಾಡುವ ಇವು ನಮಗೆ ತೊಂದರೆಯನ್ನು ಕೊಡುತ್ತವೆ, ಅವುಗಳನ್ನು ಕಡಿಮೆ ಮಾಡಿಕೊಳ್ಳಲು ನಾನಾ ತರದ ಕ್ರೀಮ್ ಗಳನ್ನು ಬಳಸುತ್ತೇವೆ, ಬಹಳಷ್ಟು ಹಣವನ್ನು ಖರ್ಚು ಮಾಡುತ್ತೇವೆ ಏನೇ ಮಾಡಿದರೂ ಮೊಡವೆಗಳು ಕಡಿಮೆಯಾಗುವುದು ಇರಲಿ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ, ಮೊಡವೆಗಳ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ತಜ್ಞರು ಒಂದು ಪರಿಹಾರ ಮಾರ್ಗವನ್ನು ಸೂಚಿಸಿದ್ದಾರೆ.

ಹದಿನೈದು ನಿಮಿಷದಲ್ಲಿ ಎರಡು ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ ಮೇಲಿರುವ ರಾಷೆಸ್ ಕಡಿಮೆಯಾಗುತ್ತವೆ, ಈ ನೀರಿನಲ್ಲಿರುವ ವಿಟಮಿನ್ಸ್, ಮಿನರಲ್ಸ್ ಚರ್ಮಕ್ಕೆ ಅಷ್ಟೇ ಅಲ್ಲದೇ ಕೂದಲಿಗೂ ಸಹ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆಯಂತೆ.

ಮೊಡವೆಗಳ ಮೇಲೆ ಅಕ್ಕಿ ತೊರೆದ ನೀರು ಪ್ರಭಾವ ಬೀರುತ್ತದೆ, ಅಕ್ಕಿ ತೊಳೆದ ನೀರಿನಲ್ಲಿ ಟಿಷ್ಯು ಪೇಪರ್ ಅನ್ನು ಮುಳಗಿಸಿ ಮುಖಕ್ಕೆ ಅಪ್ಲೇ ಮಾಡುವುದರಿಂದ ನಿಮ್ಮ ಮುಖ ಫ್ರೆಶ್ ಆಗಿ, ಮೃದುವಾಗುತ್ತದೆ, ಈ ನೀರಿನಿಂದ ಮುಖದಲ್ಲಿ ರಾಷೆಸ್ ಇರುವ ಜಾಗದಲ್ಲಿ ಉಜ್ಜಿದರೆ ಗುಣವಾಗುತ್ತದೆ.

ಜೊತೆಯಲ್ಲಿ ಇದನ್ನು ಓದಿ ಮನೆಯ ಮುಂದಿರುವ ತುಳಸಿಕಟ್ಟೆಯಲ್ಲಿನ ತುಳಸಿಯನ್ನು ನಾವು ಪೂಜಿಸುತ್ತೇವೆ ಏಕೆ.

ಸಾಧಾರಣವಾಗಿ ಬಹಳಷ್ಟು ಭಾರತೀಯರ ಮನೆ ಅಂಗಳದಲ್ಲಿ ಕೊನೆ ಪಕ್ಷ ಸಣ್ಣ ಕುಂಡಗಳಲ್ಲಿ ಇಡುವುದನ್ನು ಕಾಣುತ್ತೇವೆ, ಸೆಕ್ಸ್ ಗೃಹಿಣಿಯು ಇದಕ್ಕೆ ನೀರುಣಿಸಿ, ನಿತ್ಯ ಪೂಜೆಗೈದು ಪ್ರದಕ್ಷಿಣೆ ಮಾಡುವಳು, ಇದರ ಬೇರು, ಎಲೆ ಎಲ್ಲವೂ ಪವಿತ್ರವೇ, ದೇವರಿಗೆ ನೈವೇದ್ಯ ಅರ್ಪಿಸುವಾಗ ಸಹ ಅದರಲ್ಲಿ ತುಳಸಿ ಎಲೆ ಇರುತ್ತದೆ, ಅದರಲ್ಲಿಯೂ ವಿಶೇಷವಾಗಿ ಭಗವಾನ್ ವಿಷ್ಣು, ಆಂಜನೇಯ ಮತ್ತು ಶನಿ ಪರಮಾತ್ಮನಿಗೆ ವಿಶೇಷವಾಗಿ ಅರ್ಪಿಸುತ್ತಾರೆ, ಸಂಸ್ಕೃತದಲ್ಲಿ ತುಲನಾ ನಾಸ್ತಿ ಅಥವಾ ತುಳಸಿ ಎನ್ನುವರು, ಅಂದರೆ ಭಾರತೀಯರಿಗೆ ಇದೊಂದು ಪವಿತ್ರ ಸಸ್ಯ.

ಕರಿ ಮೆಣಸು ಬೆಲ್ಲ ಮಿಶ್ರಿತವಾಗಿ ತುಳಸಿ ಎಲೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಹಿತಕಾರಿ, ಶರೀರಕ್ಕೆ ತಗಲುವ ಪಿತ್ತ, ಕಫ, ಹೃದ್ರೋಗ ಮತ್ತು ಜ್ವರಗಳಿಗೆ ಇದರ ಸೇವನೆ ಒಳ್ಳೆಯದು, ದೀರ್ಘ ಕಾಯಿಲೆಗಳಾದ ಸಿಹಿ ಮೂತ್ರ, ಕ್ಯಾನ್ಸರ್, ಹಸ್ತಮ, ತೊನ್ನು ಇತ್ಯಾದಿಗಳಿಗೆ ಮದ್ದಾಗಿದೆ, ವೈದ್ಯರು ಕೊಡುವ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಮಾತ್ರೆಗಿಂತ ಈ ತುಳಸಿ ಎಲೆಗಳ ಸೇವನೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ, ಹಿಂದಿನ ಋಷಿಗಳು ಕೂಡ ಸೇವನೆ ಮಾಡುತ್ತಿದ್ದರು, ಅರ್ಥ ಶಾಸ್ತ್ರದಲ್ಲಿ ತುಳಸಿಯನ್ನು ಅಮೃತಮಯ ಗಿಡ ಎಂದು ತಿಳಿಸಿದೆ, ರೋಗಕಾರಕ ಕ್ರಿಮಿಗಳು ತುಳಸಿಯ ಗಾಳಿ ಬರುವಷ್ಟು ದೂರ ಓಡಿ ಹೋಗುತ್ತವೆ, ಹಾವು ಚೇಳುಗಳು ಸಹ ಬರುವುದಿಲ್ಲ ಇಂಥ ತುಳಸಿ ಮನೆಯ ಮುಂದೆ ಇದ್ದರೆ ಆ ಮನೆಗೆ ದರಿದ್ರ ದೇವತೆ ಬರುವುದಿಲ್ಲವೆಂದು ನಂಬಿಕೆಯೂ ಇದೆ, ಹಾಗೂ ಪೂಜಿಸುವ ಗೃಹಿಣಿಗೆ ಚಿರಸೌಭಾಗ್ಯ ಇರುವುದೆಂದು ಮತ್ತು ಆಯುರಾರೋಗ್ಯ ಲಭಿಸುತ್ತವೆ ಎಂದು ನಂಬಿಕೆ ಇದೆ, ಜಾತಿ ಮತ ಬೇಧವಿಲ್ಲದೆ ತುಳಸಿಯನ್ನು ಬೆಳೆಸಬಹುದು.

LEAVE A REPLY

Please enter your comment!
Please enter your name here