ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುವ ಹಲವು ಸಮಸ್ಯೆಗಳಲ್ಲಿ ಈ ಮಲಬಬದ್ಧತೆಯು ಸಹ ಒಂದು ಎಂದರೆ ಖಂಡಿತ ನೀವೆಲ್ಲರೂ ಒಪ್ಪಲೇ ಬೇಕು, ಏಕೆಂದರೆ ಇಂದಿನ ದಿನಮಾನಗಳಲ್ಲಿ ನಾವುಗಳು ಸೇವಿಸುತ್ತಿರುವ ಆಹಾರಗಳೇ ಅಂತವುಗಳಾಗಿವೆ, ದಿನದ ಇಡೀ ಕೆಲಸ ಮಾಡುತ್ತೇವೆ ಆದರೆ ದೇಹಕ್ಕೆ ಹೆಚ್ಚಾಗಿ ಬೇಕಾಗಿರುವ ನೀರನ್ನ ಸೇವಿಸುವುದನ್ನ ಮರೆತು ಬಿಡುತ್ತೇವೆ, ಇದರಿಂದ ಕಾಯಿಲೆಗಳು ಪ್ರಾರಂಭವಾಗುತ್ತವೆ, ಹಾಗೆಯೇ ಈ ಮಲಬದ್ಧತೆಯು ಸಹ ನಮ್ಮ ದೇಹವನ್ನ ಸೇರುತ್ತದೆ, ಇದರಿಂದ ಮುಕ್ತಿ ಪಡೆಯಲು ಹೆಚ್ಚೇನು ಕಷ್ಟ ಪಡಬೇಕಿಲ್ಲ, ಕೇವಲ್ಲ ನಾವು ಇಲ್ಲಿ ತಿಳಿಸಿರುವ ಕೆಲವು ಜ್ಯೂಸ್ ಗಳನ್ನ ಸೇವಿಸಿದರೆ ಸಾಕು ನಿಮ್ಮ ಮಲಬದ್ಧತೆ ಕಡಿಮೆಯಾಗುತ್ತದೆ.

ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವು ಡಿ ಹೈಡ್ರೇಟ್ ಆಗಿದ್ದರೆ ದೇಹವನ್ನು ಹೈಡ್ರೇಟ್ ಮಾಡುವುದರ ಜತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ, ಹೀಗಾಗಿ ಕರುಳಿಗೆ ಸಂಬಂಧಿದ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಕಲ್ಲಂಗಡಿ ಹಣ್ಣು ಬೆಸ್ಟ್.

ನಿಂಬೆ ಪಾನಕ ಇದು ಹಲವು ರೋಗಗಳಿಗೆ ಉತ್ತಮ ಮದ್ದಾಗಿದೆ, ನಿಂಬೆಹಣ್ಣಿನಲ್ಲಿನ ಗುಣಗಳಬಗ್ಗೆ ನಾವು ಹೆಚ್ಚೇನು ಹೇಳುವ ಅವಾಸ್ಯೆಕತೆ ಇಲ್ಲ, ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಹೋಗಲಾಡಿಸುತ್ತದೆ, ಮಲ ವಿಸರ್ಜನೆಗೆ ಕಷ್ಟ ಪಡುವವರು ಪ್ರತಿ ನಿತ್ಯ ಎರಡು ಲೋಟ ನಿಂಬೆ ಪಾನಕ ಸೇವಿಸಿದರೆ ಸಾಕು.

ಮೂಸಂಬಿ ಜ್ಯೂಸ್ ಗೆ ಒಂದು ಚಿತೆಯಷ್ಟು ಉಪ್ಪನ್ನು ಬೆರೆಸಿ ಸೇವಿಸಿದರೆ ಮಲಬದ್ದತೆಗೆ ಉತ್ತಮ, ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಯುಕ್ತ ಅಂಶ ನಾಶವಾಗುತ್ತದೆ.

ಪೈನಾಪಲ್ ಜ್ಯೂಸ್ ನಲ್ಲಿ ಹೆಚ್ಚಿನ ನೀರಿನಂಶವಿರುವುದರಿಂದ ಇದನ್ನು ತಿಂದರೆ ದೇಹಕ್ಕೆ ಹೆಚ್ಚಿನ ನೀರಿನಂಶ ವಡಗುತ್ತದೆ, ಇದರಿಂದ ಮಲವಿಸರ್ಜನೆಗೆ ಹೆಚ್ಚು ಸಹಾಯಕವಾಗುತ್ತದೆ.

ಜೊತೆಯಲ್ಲಿ ಇದನ್ನು ಓದಿ ಮೊಡವೆಗಳನ್ನು ಕೈಯಲ್ಲಿ ಕಿವುಚಿ ಆದ ಕಲೆಗಳನ್ನು ತೊಲಗಿಸಲು ಇಲ್ಲಿದೆ ಸರಳ ಉಪಾಯ.

ಮೊಡವೆಗಳು ಹದಿಹರೆಯದವರಲ್ಲಿ ಕಾಣುವುದು ಹೀಗೆ ಮೊಡವೆ ಬರಲು ಕಾರಣ ಯಾವುವೆಂದರೆ ಚರ್ಮದ ಅಶುಚಿತ್ವ ಕೂದಲಲ್ಲಿ ಇರುವ ಎಣ್ಣೆ ಅಂಶಗಳು ಎಂದು ತಿಳಿದು ಬಂದಿದೆ ತಲೆಯಲ್ಲಿರುವ ಒಟ್ಟು ಮುಖದ ಮೇಲೆ ಉದುರುವುದರಿಂದ ಮೊಡವೆಗಳು ಮೊಳಕೆ ಒಡೆಯುತ್ತವೆ.

ಹೀಗೆ ಮೊಡವೆಗಳು ಬರದಂತೆ ತಡೆಯಲು ಕೆಲವು ಉಪಾಯಗಳು.

ಮುಖವನ್ನು ದಿನಕ್ಕೆ ನಾಲ್ಕೈದು ಬಾರಿ ತೊಳೆಯಬೇಕು.

ತಲೆಯಲ್ಲಿ ಹೊಟ್ಟು ಬರದಂತೆ ನೋಡಿಕೊಳ್ಳಬೇಕು.

ಕೂದಲನ್ನು ತೊಳೆಯಲು ರಾಸಾಯನಿಕ ಶಾಂಪೂಗಳನ್ನು ಬಳಸಬಾರದು.

ಮೊಡವೆಗಳನ್ನು ಕೈಯಿಂದ ಕಿವುಚಬಾರದು ಹಾಗೆಯೇ ಉಗುರಿನಿಂದ ಸ್ಪರ್ಶಿಸಬಾರದು ಹೀಗೆ ಮಾಡುವುದರಿಂದ ಮುಖದಲ್ಲಿ ಕಲೆಗಳು ಹಾಗೆಯೇ ನಿಂತು ಹೋಗುತ್ತವೆ.

ಕೊತ್ತಂಬರಿ ಸೊಪ್ಪಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರ ಮತ್ತು ಕಲೆಗಳು ಮಾಯವಾಗುತ್ತವೆ.

ದಾಲ್ಚಿನ್ನಿ ಚಕ್ಕೆ ಯನ್ನು ನಿಂಬೆರಸದಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು ದೂರವಾಗುವುದು.

ನಿಂಬೆಹಣ್ಣಿನ ಸಿಪ್ಪೆ ಅಥವಾ ನಿಂಬೆ ಎಲೆಗಳನ್ನು ಅರಿಶಿಣದ ಜೊತೆ ಬೆರೆಸಿ ನುಣ್ಣಗೆ ಅರೆದು ಪೇಸ್ಟ್ ತಯಾರಿಸಿಕೊಳ್ಳಬೇಕು ನಂತರ ಮುಖಕ್ಕೆ ಹಚ್ಚಬೇಕು ಆಗ ಮೊಡವೆಗಳು ದೂರವಾಗುತ್ತವೆ.

LEAVE A REPLY

Please enter your comment!
Please enter your name here