ಕಾಲದಿನದ ಕಾಲಕ್ಕೆ ಬದಲಾಗುವ ವಾತಾವರಣಕ್ಕೆ ಸಿಲುಕಿ ನಾವು ಒಂದಲ್ಲ ಒಂದು ಬಾದೆಯನ್ನ ಅನುಭವಿಸುತ್ತಿರುತ್ತೇವೆ. ಅವುಗಳಲ್ಲಿ ಕಂಕುಳಿನ ಬೆವರು ಸಹ ಒಂದು. ಇದಕ್ಕೆ ನಾವು ವಿವಿಧ ರಾಸಾಯನಿಕಗಳನ್ನ ಬಳಸುವುದು ಸರ್ವೇ ಸಾಮಾನ್ಯವಾಗಿದೆ, ಆದರೆ ರಾಸಾಯನಿಕಗಳನ್ನ ಬಳಸದೆ ಕಂಕುಳಿನ ಬೆವೆರಿನಿಂದ ಮುಕ್ತರಾಗಕೂ ಇಲ್ಲಿವೆ ನೋಡಿ ಸುಲಭ ಪರಿಹಾರಗಳು.

* ಬೇಸಿಗೆ ಕಾಲದಲ್ಲಿ ದೇಹವಿಡೀ ಬೆವರುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಸಾಬೂನಿನಿಂದ ಹಾಗೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಮುಖ್ಯವಾಗಿ ಕಂಕುಳಗಳನ್ನು ಚೆನ್ನಾಗಿ ತೊಳೆಯಿರಿ. ಸಾಧ್ಯವಾದರೆ ದಿನಕ್ಕೆರಡು ಬಾರಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ದೂರವಿದ್ದು, ಶುಚಿತ್ವ ಹಾಗೂ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ. ರೇಷ್ಮೆಯಂತಹ ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟ ವಸ್ತ್ರಗಳು ತೇವಾಂಶವನ್ನು ಹೀರಿ ಚರ್ಮವನ್ನು ತೇವರಹಿತವಾಗಿಡುತ್ತದೆ.

* ಬ್ಯಾಕ್ಟೀರಿಯಾಗಳನ್ನು ಶಮನ ಮಾಡುವುದರಲ್ಲಿ ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ತುಳಸಿ ಮತ್ತು ಬೇವು ಬಹಳ ಪರಿಣಾಮಕಾರಿಯಾಗಿದೆ. ಸ್ವಲ್ಪ ತುಳಸಿ ಹಾಗೂ ಬೇವಿನ ಸೊಪ್ಪನ್ನು ಅರೆದು ಪೇಸ್ಟ್ ತರ ಮಾಡಿ ಕಂಕುಳಗಳಿಗೆ ಹಚ್ಚಿರಿ. ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ಇದನ್ನು ವಾರಕ್ಕೆ ಮೂರು ಸಲ ಮಾಡಿದಲ್ಲಿ ಪರಿಣಾಮ ಕಾಣಬಹುದು.

* ನಮ್ಮ ದೈನಂದಿನ ಆಹಾರಗಳಲ್ಲಿಯೂ ಸಾಧ್ಯವಾದಷ್ಟು ಮಟ್ಟಿಗೆ ಗಮನಹರಿಸಬೇಕಾಗಿದೆ. ಕಾಫೀ, ಖಾರದ ತಿನಿಸುಗಳು, ಕೊಬ್ಬಿನಾಂಶವಿರುವ ಆಹಾರಗಳು ಹಾಗೂ ಧೂಮಪಾನದಿಂದ ದೂರವಿದ್ದು, ಕಂಕುಳದ ವಾಸನೆಯಿಂದ ದೂರವಿರಬಹುದು.

* ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವಲ್ಲಿ ನಿಂಬೆ ಹಣ್ಣು ಕೂಡಾ ಪ್ರಭಾವಶಾಲಿಯಾಗಿದೆ. ನಿಂಬೆ ಹಣ್ಣು ನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಕಂಕುಳಕ್ಕೆ ಉಜ್ಜಿ ಅದರ ರಸವು ಕಂಕುಳದಲ್ಲಿಯೇ ಒಣಗಲು ಬಿಡಿ. ಸಂಪೂರ್ಣವಾಗಿ ಒಣಗಿದ ನಂತರ ಸ್ನಾನ ಮಾಡಿ. ಕಂಕುಳದ ವಾಸನೆ ಸಂಪೂರ್ಣವಾಗಿ ಮಾಯವಾಗುವ ತನಕ ಪ್ರತಿದಿನಕ್ಕೊಂದು ಬಾರಿ ಮಾಡಿರಿ.

* ನಾವು ಪ್ರತಿ ದಿನ ಬಳಸುವ ಡಿಯೋಡ್ರಂಟ್ ಬದಲು ಹತ್ತಿಯನ್ನು ಆ್ಯಪಲ್ ಸೈಡರ್ ವಿನೆಗರ್ ನಿಂದ ಒದ್ದೆ ಮಾಡಿ ಕಂಕುಳಕ್ಕೆ ಹಚ್ಚಿರಿ, ಇದು ಉತ್ತಮ ಪರಿಣಾಮವನ್ನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

LEAVE A REPLY

Please enter your comment!
Please enter your name here