ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳುವಲ್ಲಿ ಶುಂಠಿ ರಸವನ್ನು ಸೇವನೆ ಮಾಡುವುದು ಒಳ್ಳೆಯದು, ಯಾವೆಲ್ಲ ರೀತಿಯ ಲಾಭದಾಯಕ ಅಂಶಗಳು ಸಿಗಲಿವೆ ಅನ್ನೋದು ಇಲ್ಲಿದೆ ನೋಡಿ.
ಸಂಧಿವಾತವನ್ನು ತಡೆಯುತ್ತದೆ.
ಆಯಾಸ ಹಾಗೂ ವಾಕರಿಕೆಯನ್ನು ಹೋಗಲಾಡಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಅನಿಲ, ಅತಿಸಾರ ಅಥವಾ ಮಲಬದ್ಧತೆ ಕಡಿಮೆಯಾಗುತ್ತದೆ.
ಕೆಮ್ಮುವುದು, ಸೆಳೆತ ಅಥವಾ ಮೈಗ್ರೇನ್ನಿಂದ ದೂರವಿರಿಸುತ್ತದೆ.
ರಕ್ತದ ಹರಿವು ಮತ್ತು ಪರಿಚಲನೆ ಸುಧಾರಿಸುತ್ತದೆ.
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಒಟ್ಟಾರೆ ಹೃದಯ ಆರೋಗ್ಯ ಸುಧಾರಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ.
ಬೇಡವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ.
ಜೊತೆಯಲ್ಲಿ ಇದನ್ನು ಓದಿ ಬಾಯಿಯ ಹುಣ್ಣಿನ ಸಮಸ್ಯೆ ಮನೆ ಮದ್ದು.
ಕೆಲವರಿಗೆ ಅತಿಯಾದ ಬಾಯಾರಿಕೆ ಕಾಡುವುದುಂಟು, ಹಾಗೆಯೇ ಬಾಯಿ ಹುಣ್ಣು ಸಹ ಉಪಟಳವನ್ನು ನೀಡುತ್ತದೆ, ಹೀಗೆ ಕಾಡುವ ಬಾಯಿಯ ಹುಣ್ಣು ಅಥವಾ ಬಾಯಾರಿಕೆಯ ಸಮಸ್ಯೆಗೆ ಮನೆಯಲ್ಲೇ ನೀವು ಮಾಡಿಕೊಳ್ಳಬಹುದು ಆದಂತಹ ಕೆಲವು ಅತ್ಯುತ್ತಮ ಮನೆ ಮದ್ದು ಔಷಧಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಬಾಯಾರಿಕೆಯಿಂದ ನರಳುವವರು ಬಿಸಿ ಹಾಲಿಗೆ ಅರಿಶಿನ ಪುಡಿ, ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಬಾಯಾರಿಕೆ ದೂರವಾಗುವುದು.
ಕಾಯಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುವುದು, ಏಲಕ್ಕಿ ಕಾಳನ್ನು ಅಗಿಯುವುದರಿಂದ ಬಾಯಾರಿಕೆ ದೂರವಾಗುವುದು.
ಬಳಲಿಕೆಯಿಂದ ಬಾಯಾರಿಕೆ ಹೆಚ್ಚಾಗುವುದು, ಹೀಗಿರುವುದರಿಂದ ಬಳಲಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕು, ಸೇಬು ಮತ್ತು ನಿಂಬೆಹಣ್ಣು ಹೋಳುಗಳನ್ನಾಗಿ ಮಾಡಿಕೊಂಡು ಕುದಿಯುವ ನೀರಿಗೆ ಬೆರೆಸಿ ಸ್ವಲ್ಪ ಸಮಯ ಬಿಟ್ಟು ನೀರನ್ನು ಶೋಧಿಸಿ ಕೊಂಡು ಸಕ್ಕರೆ ಬೆರೆಸಿ ಕುಡಿಯುವುದರಿಂದ ನಿವಾರಣೆಯಾಗುವುದು.
ಅರ್ಧ ಚಮಚ ಕಾಳು ಮೆಣಸನ್ನು ಹುರಿದು ಪುಡಿಮಾಡಿಕೊಳ್ಳಿ, ಈ ಪುಡಿಯನ್ನು ಕುಡಿಯುವ ನೀರಿಗೆ ಹಾಕಿ, ಕುದಿಸಿ ಕೆಳಗಿಳಿಸಿ ತಣ್ಣಗಾದ ನಂತರ ಕುಡಿದರೆ ಬಾಯಾರಿಕೆ ದೂರವಾಗುವುದು.
ಕೊತ್ತಂಬರಿ ಬೀಜ, ಜೀರಿಗೆಯನ್ನು ಸಮ ಪ್ರಮಾಣದಲ್ಲಿ ಕುಟ್ಟಿ ನೀರಿಗೆ ಬೆರೆಸಿ ಕಷಾಯವನ್ನು ತಯಾರಿಸಿ ಹೀಗೆ ತಯಾರಿಸಿದ ಕಷಾಯವನ್ನು ಮಾಡಿ ಕುಡಿಯಿರಿ ಬಾಯಾರಿಕೆ ನಿಲ್ಲುವುದು.
ಒಂದು ಲೋಟ ಬಿಸಿನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ, ಸಕ್ಕರೆ ಸೇರಿಸಿ ಪಾನಕ ತಯಾರಿಸಿ ಕುಡಿಯಿರಿ, ಆಗ ಬಾಯಾರಿಕೆ ಬಳಲಿಕೆ ದೂರವಾಗುವುದು.
ದಾಳಿಂಬೆ ಹೂವಿನ ಕಷಾಯವನ್ನು ತಯಾರಿಸಿ ದಿನವೂ ಕಷಾಯದಲ್ಲಿ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ಹುಣ್ಣು ನಿವಾರಣೆ ಆಗುವುದು.
ಜಾಜಿ ಗಿಡದ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುವುದರಿಂದ ಬಾಯಿಯ ಹುಣ್ಣು ದೂರವಾಗುವುದು.
ಬಸಳೆ ಸೊಪ್ಪನ್ನು ಉಪ್ಪಿನ ಜೊತೆ ಅಗಿಯುವುದರಿಂದ ಬಾಯಿಯ ಹುಣ್ಣು ನಿವಾರಣೆಯಾಗುವುದು.
ಗಸಗಸೆ ಪಾಯಸ ಅಥವಾ ಒಣ ಕೊಬ್ಬರಿಯ ಜೊತೆ ಸ್ವಲ್ಪ ಹುರಿದ ಗಸಗಸೆ ಬೆಲ್ಲವನ್ನು ಸೇರಿಸಿ ಅಗಿಯುವುದರಿಂದ ಬಾಯಿಯ ಹುಣ್ಣು ದೂರವಾಗುವುದು.
ಬಾಯಿಯ ಹುಣ್ಣು ಇರುವ ಜಾಗದಲ್ಲಿ ಜೇನುತುಪ್ಪವನ್ನು ಸವರುವುದರಿಂದ ವಾಸಿಯಾಗುವುದು.