ಮೆಂತ್ಯದ ಸೊಪ್ಪಿನ ಪಲ್ಯ ತಯಾರಿಸಿ ಕ್ರಮವಾಗಿ ಸೇವಿಸುದರಿಂದ ಶ್ವಾಸಕೋಶ,ಹೃದಯ ಹಾಗೂ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ವಾಸಿಯಾಗುವುವು.

ಮೆಂತ್ಯದ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಆರಿಸಿ ತಲೆಗೆ ಹಚ್ಚುತ್ತಾ ಬಂದರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು.ಅಥವಾ ಮೆಂತ್ಯವನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆಗಳ ಬಳಿಕ ತಲೆಗೆ ಸ್ನಾನ ಮಾಡಿಕೊಂಡರೂ ಕೂದಲು ಕಪ್ಪಾಗಿರುವುದಲ್ಲದೆ ಸೊಂಪಾಗಿ ಬೆಳೆಯುವುದು.

ಮೆಂತ್ಯದಕಾಳನ್ನು ರಾತ್ರಿಮೊಸರಲ್ಲಿ ನೆನೆಸಿಟ್ಟು ಪ್ರಾತಃಕಾಲ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸುದರಿಂದ ಮಧುಮೇಹವು ನಿಯಂತ್ರಣದಲ್ಲಿರುವುದು. ಮೆಂತ್ಯ ಸೊಪ್ಪಿನಿಂದ ಪಲ್ಯ,ಹುಳಿ ಅಷ್ಟೇ ಅಲ್ಲದೆ ವಡೆ,ಪಕೋಡ,ತಂಬುಳಿ,ಪತ್ರೊಡೆ ಮುಂತಾದ ರುಚಿಕರ ಖಾದ್ಯಗಳನ್ನು ತಯಾರಿಸುತ್ತಾರೆ.

ಮೆಂತ್ಯವನ್ನು ಚೆನ್ನಾಗಿ ನೀರಿನಲ್ಲಿ ನೆನಸಿ ನುಣ್ಣಗೆ ರುಬ್ಬಿ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಎರಡು ಗಂಟೆಗಳ ಬಳಿಕ ಮುಖ ತೊಳೆದುಕೊಳ್ಳಬೇಕು.ಈ ರೀತಿ ಮಾಡುತ್ತಾ ಬಂದರೆ ಮುಖದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು. ಮೆಂತ್ಯದ ಸೊಪ್ಪನ್ನು ಆಗಾಗ ಆಹಾರದಲ್ಲಿ ಬಳಸುವುದರಿಂದ ಮೈ,ಕೈ ನೋವು,ಬೆನ್ನು ನೋವು,ಸೊಂಟ ನೋವು ಇತ್ಯಾದಿಗಳನ್ನು ನಿವಾರಿಸಿಕೊಳ್ಳಬಹುದು.

ಜೊತೆಯಲ್ಲಿ ಇದನ್ನು ಓದಿ ಅತಿಯಾದ ಕುತ್ತಿಗೆ ನೋವು ಬಂದರೆ ಮನೆಯಲ್ಲೇ ಹೀಗೆ ಮಾಡಿ.

ಪೂರ್ತಿ ದಿನ ದುಡಿಯುವರಿಗೆ ಗೊತ್ತು ಕುತ್ತಿಗೆ ನೋವಿನ ಹಿಂಸೆ ಯಾಕೆಂದರೆ ಪ್ರತಿ ದಿನ ಇವರು ಕುಟ್ಟಿ ನೋವಿಂದ ನರಳುತ್ತಿರುತ್ತಾರೆ, ಕಾಪುಟರ್ ಮುಂದೆ ಕೂತು ಕೆಲಸ ಮಾಡುವುದರಿಂದ ಕಾರ್ ಡ್ರೈವಿಂಗ್ ಮಾಡುವವರ ವರೆಗೂ ಕುತ್ತಿಗೆ ನೋವು ಸಾಮಾನ್ಯ ಕೆಲವರಿಗೆ ಕುತ್ತಿಗೆ ನೋವಿನಿಂದ ಕೈ ನೋವು ಬರುತ್ತದೆ. ಇದನ್ನು ರೆಫರಿಂಗ್ ಪೇನ್ ಎನ್ನುತ್ತಾರೆ.

ಇದಕ್ಕೆ ಫಿಸಿಯೋಥೆರೆಪಿ ಮುಂತಾದ ಚಿಕಿತ್ಸೆಗಳ ಅವಶ್ಯಕತೆ ಇರುತ್ತದೆ, ಕುತ್ತಿಗೆ ನೋವಿಗೆ ಪದೇ ಪಾಏ ಮಾತ್ರೆ ಸೇವಿಸ ಬೇಡಿ ಅದರ ಬದಲು ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಸಿನೀರಿನ ಶಾಖ, ಅಲ್ಟರನೇಟ್ ಥೆರೆಪಿ ಮುಂತಾದ ಸುಲಭ ಪ್ರಕೃತಿಚಿಕಿತ್ಸೆಗಳಿಂದ ನೋವು ಶಮನವಾಗುತ್ತದೆ.

ಪ್ರತಿದಿನ ಬೆಳಗ್ಗೆ ಯಾವುದಾದರೊಂದು ರೀತಿಯ ಒಂದು ಹಿಡಿ ಹಸಿರು ಸೊಪ್ಪನ್ನು ತೆಗೆದುಕೊಂಡು (ಉದಾಹರಣೆಗೆ: ನುಗ್ಗೆಸೊಪ್ಪು, ಮೆಂತ್ಯೆ ಸೊಪ್ಪು, ಕರಿಬೇವಿನ ಸೊಪ್ಪು ಇತ್ಯಾದಿ) ಅದಕ್ಕೆ ಒಂದು ಚಮಚ ಕಪ್ಪು ಎಳ್ಳು, ಒಂದು ಚಮಚ ಅಗಸೆ ಬೀಜ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದು. ಇದು ಪೋಷಕಾಂಶಗಳ ಆಗರ. ಇನ್​ಪ್ಲಮೇಶನ್ ಪ್ರಕ್ರಿಯೆಯನ್ನು ನಿಧಾನಗೊಳಿಸಿ ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

ಪ್ರತಿನಿತ್ಯ ಈ ಒಮೆಗಾ-3 ಮೇದಾಮ್ಲ ಸೇವಿಸಬೇಕು. ಇದು ಇನ್​ಪ್ಲಮೇಶನ್ ಕಡಿಮೆ ಮಾಡುತ್ತದೆ, ನಿತ್ಯ ಬೆಳಗ್ಗೆ ಅಥವಾ ಸಂಜೆ ಎಳೆ ಬಿಸಿಲಿಗೆ 20 ರಿಂದ 30 ನಿಮಿಷ ಮೈ ಒಡ್ಡುವುದರಿಂದ ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಸಿಗುತ್ತದೆ. ಎಲುಬು ಗಟ್ಟಿಯಾಗಲು ವಿಟಮಿನ್ ಡಿ ಬೇಕು.

ಮಾಂಸಾಹಾರಿಗಳಿಗೆ ಚಿಕನ್, ಮಟನ್, ಮೊಟ್ಟೆಗಳಿಂದ ಸಾಕಷ್ಟು ಪ್ರೊಟೀನ್ ಸಿಗುತ್ತದೆ. ಸಸ್ಯಾಹಾರಿಗಳಿಗೆ ಇದು ಲಭ್ಯವಾಗದ ಕಾರಣ ಪ್ರೊಟೀನ್ ಪೌಡರ್ ತೆಗೆದುಕೊಳ್ಳುವುದು ಉತ್ತಮ. ಮೊಳಕೆಕಾಳು, ಸೋಯಾ ಸಹ ಪ್ರೊಟೀನ್ ಹೊಂದಿರುತ್ತದೆ, ಪ್ರತಿನಿತ್ಯ ಸುಮಾರು 50 ಗ್ರಾಂ ಶೇಂಗಾ ಬೇಯಿಸಿ ಅಥವಾ ನೆನೆಸಿ ಸೇವಿಸುತ್ತ ಬಂದಲ್ಲಿ ನೋವು ನಿವಾರಣೆಗೆ ಇದು ಸಹಕಾರಿ.

LEAVE A REPLY

Please enter your comment!
Please enter your name here