ಹೌದು ಮುಖದ ಮೇಲೆ ಕೆಲವೊಂದು ಕಾರಣಗಳಿಂದ ಬರುವಂತ ಈ ಮಾಡವೆಗಳಿಗೆ ಹಾಗು ಮೊಡವೆಯಿಂದ ಉಂಟಾದ ಗಾಯದ ಕಲೆ ಮಾಯವಾಗಲು ನೀಮ್ಮ ಮನೆಯಲ್ಲಿಯೇ ಮದ್ದು ಮಾಡಬಹುದು. ನೈಸರ್ಗಿಕವಾಗಿ ದೊರಕುವ ಇಂತಹ ಮನೆಮದ್ದುಗಳಿಂದ ಇಂತ ಸಮಸ್ಯೆಗಳನ್ನು ದೂರಮಾಬಹುದು. । ಇದನ್ನೂ ಓದಿ : ಸರ್ವ ಕಾಲಕ್ಕೂ ನೀವು ತಿಳಿದಿರಲೇಬೇಕಾದ ಮಜ್ಜಿಗೆಯ ಉಪಯೋಗಗಳು..

ಮೊಡವೆ ಗಾಯದ ನೋವಿನ ಶಮನಕ್ಕೆ ಗಂಧದ ಪುಡಿ ಒಳ್ಳೆಯ ಔಷಧಿ. ಗಂಧದ ಪೇಸ್ಟನ್ನು ಚರ್ಮದ ಮೇಲೆ ಮತ್ತು ಮೊಡವೆ ಇತ್ಯಾದಿಗಳಿಂದ ಉಂಟಾದ ಗಾಯದ ಮೇಲೆ ಹಚ್ಚಿ. ಎಲ್ಲ ಇನ್ಫೆಕ್ಷನ್ ಗಳಿಂದಲೂ ಮುಕ್ತವಾಗುತ್ತದೆ.

ನಿಂಬೆ ರಸವು ಮೊಡವೆಯಿಂದ ಉಂಟಾಗುವ ಗಾಯ ಮಾಯವಾಗಿಸಲು ನಿಂಬೆ ರಸ ಉತ್ತಮ . ದಿನದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಳೆದ ನಂತರ ಮುಖ ತೊಳೆದರೆ ಚರ್ಮದ ಕಲೆ ನಿವಾರಣೆಯಾಗುತ್ತದೆ ಹಾಗು ಚರ್ಮ ಮೃದುವಾಗಿ ಮತ್ತು ಕಾಂತಿಯುತವಾಗಿರುತ್ತದೆ.

ಟೊಮೆಟೊದಲ್ಲಿ ವಿಟಮಿನ್ ಎ ಇರುವುದರಿಂದ ಮುಖದ ಜಿಡ್ಡಿನಂಶ ಕಡಿಮೆ ಮಾಡುತ್ತದೆ. ಟೊಮೆಟೊ ತುಂಡುಗಳನ್ನು ಮೊಡವೆಯಿಂದಾದ ಗಾಯದ ಮೇಲೆ ಇಡುವುದರಿಂದ ಮುಖದ ಅಂದ ಹೆಚ್ಚುತ್ತದೆ. ಮೊಡವೆ ಗಾಯಗಳೂ ಇಲ್ಲದಂತಾಗುತ್ತದೆ. । ಇದನ್ನೂ ಓದಿ : ತಲೆದಿಂಬಿನ ಸಹಾಯವಿಲ್ಲದೆ ನಿದ್ರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..? ತಿಳಿಯಲು ಈ ಲೇಖನವನ್ನ ತಪ್ಪದೆ ಓದಿ..!

ಬಿಸಿ ಹಾಲಿಗೆ ಒಂದು ತುಂಡು ಹತ್ತಿಯನ್ನು ಅದ್ದಿ ತೆಗೆದು ಮುಖವನ್ನು ಅದರಲ್ಲಿ ಒರೆಸಿ. ನಿಮಗೇ ಕಾಣದ ಎಷ್ಟೋ ಕೊಳೆಯನ್ನು ಇದು ತೆಗೆದುಹಾಕುತ್ತದೆ. ಹಾಗೂ ಮುಖದ ರಂದ್ರಗಳಿಗೂ ತಲುಪಿ ಸ್ವಚ್ಛಮಾಡುತ್ತದೆ. ಅವುಗಳಲ್ಲದೆ ಐಸ್ ಕ್ಯೂಬ್ ನ್ನು ಮೊಡವೆ ಗಾಯದ ಮೇಲೆ ನಯವಾಗಿ ತಿಕ್ಕಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

ಪುದಿನಾ, ಬೇವು, ತಳಸಿ ಎಲೆಗಳನ್ನು ಒಣಗಿಸಿ ಪುಡಿಮಾಡಿ. ಈ ಪುಡಿಗೆ ಲಿಂಬೆರಸ ಹಾಗೂ ಎಳೆನೀರು ಸೇರಿಸಿ ಮುಖಕ್ಕೆ ಹಚ್ಚಿ ಅರ್ಧಗಂಟೆಯ ಬಳಿಕ ತೊಳೆಯಿರಿ. ವಾರಕ್ಕೆರಡು ಬಾರಿ ನಿಯಮಿತವಾಗಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. । ಇದನ್ನೂ ಓದಿ : ಪ್ರತಿದಿನ ರಾಗಿ ಮುದ್ದೆ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..? ತಿಳಿದರೆ ಖಂಡಿತ ನೀವು ಶಾಕ್ ಆಗ್ತೀರಾ..!

LEAVE A REPLY

Please enter your comment!
Please enter your name here