ಪಪ್ಪಾಯ ಹಣ್ಣು ಹಲವು ರೋಗ ನಿವಾರಕ ಅಂಶಗನ್ನು ಹೊಂದಿದೆ. ನಿಮ್ಮಲ್ಲಿ ಈ ಹಣ್ಣಿ ಮಹತ್ವ ಅಷ್ಟರ ಮಟ್ಟಿಗೆ ತಿಳಿದಿರುವುದಿಲ್ಲ ಆದರೆ ಈ ಹಣ್ಣು ಮಾನವ ದೇಹಕ್ಕೆ ಉತ್ತಮ ಆರೋಗ್ಯಕಾರಿ ಹಣ್ಣಾಗಿದ್ದು ಇದರ ಸೇವನೆ ಮಾಡುವುದರಿಂದ ಹಲವು ಪ್ರಯೋಜನವಾಗುತ್ತದೆ. । ಇದನ್ನೂ ಓದಿ : ಬದನೇಕಾಯಿ ಮಹತ್ವ ತಿಳಿದುಕೊಳ್ಳಿ ಮತ್ತು ಹೆಚ್ಚಾಗಿ ಮಹಿಳೆಯರು ಬದನೇಕಾಯಿ ಸೇವಿಸಿ…!

ಹಾಗಾದರೆ ಪಪ್ಪಾಯ ಹಣ್ಣಿನಲ್ಲಿ ಯಾವೆಲ್ಲ ಆರೋಗ್ಯಕಾರಿ ಗುಣಗಳಿವೆ ತಿಳಿಯೋಣ.

ಎರಡು ಟೀ ಚಮಚ ಪಪ್ಪಾಯ ಹಣ್ಣಿನ ತಿರುಳಿಗೆ ಎರಡು ಚಮಚ ಆಲೋವಿರಾ ತಿರುಳನ್ನು ಬೆರಸಿ ಮುಖಕ್ಕೆ ಹಚ್ಚುವುದರಿಂದ ಎಣ್ಣೆಯ ಅಂಶ ಮತ್ತು ಒಣ ಚರ್ಮವನ್ನು ತೊಲಗಿಸುತ್ತದೆ.

ನಿಮ್ಮಲ್ಲಿ ಮೂಲವ್ಯಾಧಿಯಿಂದ ಬಳಲುವವರಿಗೆ ಪಪ್ಪಾಯ ಹಣ್ಣು ತಿನ್ನೋದು ಒಳ್ಳೆಯದು.ಹಾಗು ಕೆಲವರಿಗೆ ನರದೌರ್ಬಲ್ಯ ಇರುತ್ತದೆ ಹಾಗು, ಹೃದ್ರೋಗದಿಂದ ಬಳಲುವವರಿಗೆ ಈ ಹಣ್ಣಿನ ಸೇವನೆ ಮಾಡಿದರೆ ಇವುಗಳಿಂದ ಮುಕ್ತಿ ಹೊಂದಬಹುದು.

ಸ್ತ್ರೀಯರು ಅಥವಾ ಪುರುಷರು ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಮೊಡಮೆ ಮತ್ತು ಗುಳ್ಳೆಗಳಿಂದ ದೂರ ಉಳಿಯುವುದು ಒಳ್ಳೆಯದು ಆದ್ದರಿಂದ ಪಪ್ಪಾಯ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಒಳ್ಳೆಯದು .

ಕೂದಲು ಕಾಂತಿಯುಕ್ತವಾಗಲು ಹಾಗು ಆರೋಗ್ಯಕರವಾಗಿರಲು ಹದಿನೈದು ದಿನಗಳಿಗೊಮ್ಮೆ, ಚೆನ್ನಾಗಿ ಹಣ್ಣಾಗಿರುವ ಪಪ್ಪಾಯ ಸಿಪ್ಪೆ, ತಿರುಳು, ಬೀಜ ಸಮೇತ ನುಣ್ಣಗೆ ಅರೆಯಬೇಕು. ಇದನ್ನು ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತೊಳೆಯಬೇಕು. । ಇದನ್ನೂ ಓದಿ : ದಾಳಿಂಬೆ ಹಣ್ಣಿನಲ್ಲಿರುವ ಔಷಧಿಯ ಗುಣಗಳ ಬಗ್ಗೆ ಒಂದಿಷ್ಟು ಮಾಹಿತಿ…

ಹೊಟ್ಟೆಯ ಹುಳಗಳನ್ನು ನಿಯಂತ್ರಿಸಲು 15 ಹನಿಯಷ್ಟು ಪಪ್ಪಾಯ ಗಿಡದ ಹಾಲನ್ನು 15ಹನಿ ಹರಳೆಣ್ಣೆಯ ಜತೆ ನಿಯಮಿತ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಪಪ್ಪಾಯದ ಹಣ್ಣು ಜೀರ್ಣ ಶಕ್ತಿ ಹೆಚ್ಚುತ್ತದೆ. ಬಾಯಿ ಹುಣ್ಣಿಗೆ ಪಪ್ಪಾಯ ಗಿಡದ ಹಾಲನ್ನು ಹುಣ್ಣಿಗೆ ಹಚ್ಚಿದರೆ ಕಡಿಮೆಯಾಗುತ್ತದೆ.ಹಾಗು ಪಪ್ಪಾಯ ಹಣ್ಣಿನ ಸೇವನೆಯಿಂದ ಮಲಬದ್ಧತೆ ಹಾಗೂ ಉರಿಮೂತ್ರ ಗುಣವಾಗುತ್ತದೆ.

ಮಾಗಿದ ಪಪ್ಪಾಯ ಹಣ್ಣಿಗೆ ಒಂದು ಟೀ ಚಮಚ ಹಾಲು, ಜೇನನ್ನು ಚೆನ್ನಾಗಿ ಬೆರಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು. 20 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ. ನಿಮ್ಮ ಮುಖ ಕಾಂತಿಯೊಂದಿಗೆ ನಳನಳಿಸುತ್ತಿರುತ್ತದೆ. । ಇದನ್ನೂ ಓದಿ : ಅಲ್ಹೋವೆರಾದಲ್ಲಿದೆ ನಿಮ್ಮ ತ್ವಚೆಯನ್ನು ವೃದ್ಧಿಸುವ ಹಲವು ಗುಣಗಳು..!

LEAVE A REPLY

Please enter your comment!
Please enter your name here