ಕಾಫೀ ಅನ್ನೋವು ಮನುಷ್ಯನ ಆರೋಗ್ಯಕ್ಕೆ ಒಂದು ಉತ್ತಮ ಆಹಾರವಾಗಿದೆ ಹೀಗಿರುವ ನೀವು ಪ್ರತಿದಿನ ಕಾಫೀ ಕುಡಿಯುವದರಿಂದ ಆಗುವ ಪ್ರಯೋಜನಗಳು ಮತ್ತು ನಿಮ್ಮಲ್ಲಿ ಆಗುವ ಬದಲಾವಣೆಗಳು ಇಲ್ಲಿವೆ ನೋಡಿ. । ಇದನ್ನೂ ಓದಿ : ಮಜ್ಜಿಗೆ ನಿಮ್ಮ ದೇಹಕ್ಕೆ ಎಷ್ಟು ಉಪಯುಕ್ತ ಗೊತ್ತೇ ? ಈ ಲೇಖನ ಓದಿ..

ಕಾಫಿಯಿಂದಾಗುವ  ಪ್ರಯೋಜನಗಳು:
ಕಾಫಿ ನಮ್ಮ ಮೆಟಬೋಲಿಸಂ ಅನ್ನು ಹೆಚ್ಚಿಸಿ ಕೊಬ್ಬನ್ನು ಕರಿಗಿಸಲು ಸಹಾಯ ಮಾಡುತ್ತದೆ.

ಕಾಫಿ ಒಳಗಿರುವ  ರಾಸಾಯನಿಕಗಳು ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ.

ಕಾಫಿಯು ಉತ್ತಮ  ಆಂಟಿಆಕ್ಸಿಡೆಂಟ್ಗಳನ್ನ ಹೊಂದಿದ್ದು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ.

ಒಂದು ಕಪ್ ಕಾಫಿ  ವಿಟಮಿನ್ B2, B3, ಮತ್ತು B5 ಗಳ ಆಗರವಾಗಿದೆ.

ಕಾಫಿಯೊಳಗಿನ ಅಂಶಗಳು ಲಿವರ್ ಅನ್ನು ಸಂರಕ್ಷಿಸುತ್ತದೆ.

ಕಾಫಿ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾಫಿ ಪ್ರಭಾವಗಳ ಟೈಮ್ ವಿಂಡೋ:

ನೀವು ಕಾಫಿ ತೆಗೆದುಕೊಂಡಾಗಲಿಂದ ದೇಹದಲ್ಲಿ ಏನೇನು ಆಗುತ್ತೆ ಎಂಬುದನ್ನ ತಿಳಿಯೋಣ:

10 ನಿಮಿಷಗಳಲ್ಲಿ: ಕಾಫಿಯಿಂದ ಕೆಫೀನ್ ನಿಮ್ಮ ರಕ್ತವನ್ನು  ಪ್ರವೇಶಿಸುತ್ತದೆ, ಇದರಿಂದ ನಿಮ್ಮ ರಕ್ತದೊತ್ತಡ ಮತ್ತು ಹೃದಯ ಬಡಿತವು  ಹೆಚ್ಚಾಗುತ್ತದೆ.

20 ನಿಮಿಷಗಳಲ್ಲಿ: ಕೆಫೀನ್ ಮೆದುಳಿನ ಅಡೆನೊಸೈನ್ ಗಳ ಚಟುವಟಿಕೆಗಳನ್ನು ಕಡಿಮೆ ಮಾಡಿ ಮಂಕುತನವನ್ನು ಹೋಗಲಾಡಿಸುತ್ತದೆ. ಹಾಗೆಯೇ ಡೋಪಮೈನ್ ಹೆಚ್ಚಿಸಿ ಅಲೆರ್ಟ್ನೆಸ್ ಮತ್ತು ಆಕ್ಟಿವೇನೆಸ್ಸ್ ಉಂಟು ಮಾಡುತ್ತದೆ. । ಇದನ್ನೂ ಓದಿ : ಪ್ರತಿನಿತ್ಯ ಇದನ್ನು ತಿಂದರೆ ಏನೇನು ಬದಲಾವಣೆ ಆಗುವುದು ನಿಮಗೆ ಗೊತ್ತೆ…?

30 ನಿಮಿಷಗಳಲ್ಲಿ: ಅಡ್ರಿನಲ್ ಗ್ರಂಥಿಗಳು ಉತ್ತೇಜನಗೊಂಡು ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತವೆ.ಕಣ್ಣುಗಳ ರಕ್ತ ಸಂಚಾರ ಹೆಚ್ಚಾಗಿ ಪುಪಿಲ್ ಅಗಲಿಸುತ್ತದೆ ಇದರಿಂದ ದೃಷ್ಟಿ ತೀಕ್ಷ್ಣಗೊಳ್ಳುತ್ತದೆ.

40 ನಿಮಿಷಗಳಲ್ಲಿ: ದೇಹವು ಹೆಚ್ಚು ಸಿರೊಟೋನಿನ್ ಅನ್ನು ಉತ್ಪಾದಿಸುತ್ತದೆ, ಇದು ಮೋಟಾರ್ ನ್ಯೂರಾನ್ ಗಳನ್ನು ಉತ್ತೇಜಿಸಿ  ಸ್ನಾಯುಗಳ ಬಲ ಮತ್ತು ಕಾರ್ಯದಕ್ಷತೆಯನ್ನು ಹೆಚ್ಚು ಮಾಡುತ್ತದೆ.

4 ಗಂಟೆಗಳೊಳಗೆ: ಜೀವಕೋಶಗಳಲ್ಲಿ  ಮೆಟಾಬಾಲಿಸಮ್ ಹೆಚ್ಚಾಗುವುದರಿಂದ  ಕ್ಯಾಲೊರಿ ಬರ್ನಿಂಗ್ ಅಧಿಕವಾಗುತ್ತದೆ. ಇದು ಅಧಿಕ ಕೊಬ್ಬನ್ನು ಕರಗಿಸಿ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೊಟ್ಟೆಯಲ್ಲಿ ಆಸಿಡ್ ಪ್ರಮಾಣವನ್ನು ಅಧಿಕಗೊಳಿಸುತ್ತದೆ.

6 ಗಂಟೆಗಳೊಳಗೆ:  ಕಾಫಿ ಒಂದು ಮೂತ್ರವರ್ಧಕ( ಡೈಯುರೆಟಿಕ್) ಆಗಿದ್ದು ಹೆಚ್ಚು ಮೂತ್ರವನ್ನು ದೇಹದಿಂದ  ಹೊರ ಹಾಕುತ್ತದೆ. ಸೇವಿಸಿರುವ ಶೇಕಡಾ ೫೦ರಷ್ಟು ಕೆಫೀನ್ ಅಂಶವು ಮೂತ್ರದ ಮೂಲಕ ದೇಹದಿಂದ ಹೊರ ಹೋಗುತ್ತದೆ. । ಇದನ್ನೂ ಓದಿ : ಅಲೋವೆರಾದಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ……!

LEAVE A REPLY

Please enter your comment!
Please enter your name here