* ನೀರನ್ನ ಕುಡಿಯಬಾರದು


ಸಾಮಾನ್ಯವಾಗಿ ದೇಹವು ಹೆಚ್ಚು ದಣಿದಾಗ ನೀರು ಕುಡಿಯುವುದು ಒಂದು ಅಭ್ಯಾಸ, ಆದರೆ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಸೂಕ್ತವಾದದ್ದಲ್ಲ. ತಾಲೀಮು ಅಥವಾ ಅಭ್ಯಾಸದ ಸಮಯದಲ್ಲಿ ದೇಹದಿಂದ ಹೊರ ಹೊಮ್ಮಿದ ನೀರಿನಂಶವು ಪುನಃ ತಾನಾಗಿಯೇ ದೇಹದಲ್ಲಿ ಶೇಖರಣೆಗೊಳಗಾಗಬೇಕು. ತಕ್ಷಣಕ್ಕೆ ನೀರನ್ನು ಕುಡಿಯ ಬಾರದು.

* ವಿಶ್ರಾಂತಿಯನ್ನು ಮರೆಯಬೇಡಿ


ಜಿಮ್ ಮಡಿದ ನಂತರ ದೇಹ ದಣಿದು ಬಿಸಿಯಾಗಿರುತ್ತದೆ. ಅನಂತಹ ಸಮಯದಲ್ಲಿ ದೇಹವನ್ನು ವಿಶ್ರಾಂತಿಗೊಳಪಡಿಸಿ ತಂಪಾಗುವಂತೆ ಮಾಡಬೇಕು. ಈ ಕ್ರಿಯೆಯನ್ನು ಮರೆಮಾಚಬಾರದು. ಹೃದಯದ ಬಡಿತ ಸಾಮಾನ್ಯ ಸ್ಥಿರತೆಗೆ ತರಲು ಕೆಲವು ವಿಸ್ತರಣೆಗಳನ್ನು ಮಾಡುವುದರ ಮೂಲಕ ಸಮತೋಲನ ಕಾಯ್ದುಕೊಳ್ಳಬಹುದು. ಇದು ನಿಮ್ಮ ಮುಂದಿನ ಕಾರ್ಯವನ್ನು ಸರಾಗವಾಗಿ ಮಾಡಲು ಅನುವುಮಾಡಿಕೊಡುತ್ತದೆ.

* ಮುಖವನ್ನು ಮುಟ್ಟಬೇಡಿ

ಜಿಮ್ ಮತ್ತು ವ್ಯಾಯಾಮ ಮಾಡುವ ಸಮಯದಲ್ಲಿ ಬಳಸಿದ ಸಲಕರಣೆಗಳನ್ನು ಅನೇಕ ಜನರು ಮುಟ್ಟಿರುತ್ತಾರೆ. ಅವರ ಬೆವರಿನಿಂದ ಅನೇಕ ಸುಕ್ಮಾಣುಗಳು ಅಂಟಿಕೊಂಡಿರುತ್ತವೆ. ಅದನ್ನು ಮುಟ್ಟಿದ ನಮ್ಮ ಕೈಗಳಿಗೂ ಅಂಟಿಕೊಂಡಿರುತ್ತವೆ. ಆ ಕೈಗಳಿಂದ ಮುಖವನ್ನು ಸ್ಪರ್ಶಿಸಿದಾಗ ರೋಗಾಣುಗಳು ನಮ್ಮ ತ್ವಚೆಗೆ ಅಂಟಿಕೊಳ್ಳುತ್ತವೆ. ಹಾಗಾಗಿ ಜಿಮ್ ನಂತರ ಮೊದಲು ಸ್ನಾನ ಅಥವಾ ಕೈಕಾಲುಗಳನ್ನು ತೊಳೆದುಕೊಳ್ಳಬೇಕು.

* ಅದೇ ಬಟ್ಟೆಯಲ್ಲಿ ಇರಬಾರದು


ಜಿಮ್ ಮತ್ತು ವ್ಯಾಯಾಮ ಮಾಡುವ ಸಮಯದಲ್ಲಿ ದೇಹದಿಂದ ಬಿಡುಗಡೆಯಾಗುವ ಬೆವರು ಬಟ್ಟೆಗೆ ಅಂಟಿಕೊಂಡಿರುತ್ತದೆ. ಜಿಮ್ ನ ನಂತರ ನಾವು ಕಡ್ಡಾಯವಾಗಿ ಉಡುಗೆಯನ್ನು ಬದಲಿಸಬೇಕು. ಇಲ್ಲವಾದರೆ ಸುಕ್ಮಾಣುಗಳು ನಮ್ಮ ತ್ವಚೆಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಅಲ್ಲದೆ ದೇಹದ ವಾಸನೆಗೂ ಕಾರಣವಾಗುವುದು.

* ಕೊಬ್ಬಿನ ಆಹಾರವನ್ನ ಸೇವಿಸಬೇಡಿ.


ದೇಹವು ಜಿಮ್ ಮತ್ತು ವ್ಯಾಯಾಮದಿಂದ ದಣಿದಿರುವಾಗ ಕೊಬ್ಬಿನ ಆಹಾರ ಪದಾರ್ತಗಳನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಮಾಡಿದ ಪರಿಶ್ರಮಕ್ಕೆ ಯಾವುದೇ ಫಲ ದೊರೆಯದು. ಆದಷ್ಟು ಗುಣಮಟ್ಟದ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಯುಕ್ತ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರವು ತ್ವರಿತವಾಗಿ ರಕ್ತವನ್ನು ಪ್ರವೇಶಿಸುತ್ತದೆ. ಕೊಬ್ಬಿನ ಆಹಾರ ಸೇವಿಸಿದರೆ ಅವು ಜೀರ್ಣಾಂಗ ಕ್ರಿಯೆಯನ್ನು ನಿಧಾನಗೊಳಿಸುತ್ತವೆ.

LEAVE A REPLY

Please enter your comment!
Please enter your name here