ನಾವು ಹೆಚ್ಚಾಗಿ ಮೊಟ್ಟೆ ಬಳಸಿದ ಆಹಾರವನ್ನ ಸೇವಿಸುತ್ತೇವೆ. ಮೊಟ್ಟೆಯನ್ನು ಕೇವಲ ಬಾಯಿಯ ರುಚಿಗೆ ಮಾತ್ರ ಸೇವಿಸುವವರೇ ಹೆಚ್ಚು. ಆದರೆ ಬೇಯಿಸಿದ ಮೊಟ್ಟೆ ಬಾಯಿಗೆ ರುಚಿನೀಡುವುದರ ಜೊತೆಗೆ ದೇಹದ ಆರೋಗ್ಯಕ್ಕೆ ಉತ್ತಮವಾದದ್ದು. ಮೊಟ್ಟೆಯ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ಮುಂದೆ ನೋಡಿ… । ಇದನ್ನೂ ಓದಿ : ಬಾಳೆ ಎಲೆ ಊಟದ ಉಪಯೋಗಗಳು ನೀವು ಕೇಳಿದರೆ ಅಚ್ಚರಿ ಪಡುತ್ತೀರಿ..!

* ಬೇಯಿಸಿದ ಮೊಟ್ಟೆ ಆಕಾರದಲ್ಲಿ ಸಣ್ಣದಾಗಿದ್ದರೂ ಅದು ವಿಟಮಿನ್ ಪ್ರೊಟೀನ್ ಗಳ ಒಂದು ಸಂಮಿಶ್ರಣವಾಗಿದೆ. ಬೇಯಿಸಿದ ಮೊಟ್ಟೆಯಲ್ಲಿ ಪೊಟ್ಯಾಶಿಯಂ, ಐರನ್ ಜಿಂಕ್, ವಿಟಮಿನ್ ಇ, ಮತ್ತು ಫೋಲೇಟ್ ಇವೆ. ಸಂಶೋಧನೆಗಳ ಪ್ರಕಾರ ಬೇಯಿಸಿದ ಮೊಟ್ಟೆಯಲ್ಲಿ ೬.೨೯ ಗ್ರಾಂ ನಷ್ಟು ಪ್ರೊಟೀನ್ ಇದ್ದು, ೭೮ ಕ್ಯಾಲೋರಿಗಳಿವೆ.

* ಬೇಯಿಸಿದ ಮೊಟ್ಟೆಯು ನಿಮ್ಮ ದೇಹವನ್ನು ಭರ್ತಿಗೊಳಿಸಿ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಆದ್ದರಿಂದಲೇ ದೈಹಿಕ ತಜ್ಞರು ಬೇಯಿಸಿದ ಮೊಟ್ಟೆಯನ್ನು ವರ್ಕ್ ಔಟ್ ಗಿಂತ ಮುಂಚೆ ತಿನ್ನಲು ಉಪದೇಶಿಸುತ್ತಾರೆ. । ಇದನ್ನೂ ಓದಿ : ತಾಮ್ರದ ಲೋಟದಲ್ಲಿ ನೀರು ಕುಡಿಯೋದ್ರಿಂದ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ..!

* ಬೆಳಗಿನ ಉಪಹಾರಕ್ಕೆ ಚನ್ನಾಗಿ ಬೇಯಿಸಿದ ಮೊಟ್ಟೆಯನ್ನ ನೀವು ತಿಂದಿರೆಂದರೆ ನಿಮ್ಮ ದಿನದ ಪ್ರಾರಂಭ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿರುತ್ತದೆ.

LEAVE A REPLY

Please enter your comment!
Please enter your name here