ನಮ್ಮ ಪೂರ್ವಿಕರು ಧೀರ್ಗಯುಷಿಗಳು, ವೃದ್ದಾಪ್ಯ ಬಂದರು ಸಾಕಷ್ಟು ದೃಢವಾಗಿ, ಆರೋಗ್ಯವಾಗಿ ಇರುತ್ತಿದ್ದರು. ಅದಕ್ಕೆ ಅವರು ನಿತ್ಯ ಔಷದ ಗುಣಗಳನ್ನು ಹೊಂದಿರುವ ಆಹಾರ ತೆಗೆದುಕೊಳ್ಳುತ್ತಿದ್ದ ಕಾರಣ ಅವರು ಹೆಚ್ಚಿನ ಕಾಲ ಜೀವಿಸುತಿದ್ದರೆಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆಯಸ್ಸನ್ನು ಹೆಚ್ಚಿಸುವ ಆಹಾರಗಳನ್ನು ಇಲ್ಲಿ ನೀಡಿದ್ದೇವೆ. ಇವನ್ನು ಆಹಾರದಲ್ಲಿ ಹಿತಮಿತವಾಗಿ ಬಳಸಿದರೆ ಉತ್ತಮ. ಅವು ಏನು ಎಂದು ತಿಳಿದುಕೊಂಡು ಇತರರಿಗೂ ತಿಳಿಸಿ.  । ಇದನ್ನೂ ಓದಿ : ಈ ಲಕ್ಷಣಗಳು ಕಂಡುಬಂದರೆ ಒಮ್ಮೆ ಶುಗರ್ ಟೆಸ್ಟ್ ಮಾಡಿಸಿಕೊಳ್ಳಿ….!

* ಬೆಟ್ಟದ ನೆಲ್ಲಿಕಾಯಿ


ಇದರಲ್ಲಿ ವಿಟಮಿನ್ ಸಿ ಇದೆ. ದೇಹವನ್ನು ಸೋಂಕುಗಳಿಂದ, ರೋಗಗಳಿಗೆ ತುತ್ತಾಗದಂತೆ ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ಪೋಷಿಸುತ್ತದೆ. ಇದರಲ್ಲಿ ಸಮೃದ್ಧವಾಗಿ ಇರುವ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚು ಕಾಲ ಜೀವಿಸಲು ಉಪಯೋಗಕ್ಕೆ ಬರುತ್ತವೆ.

* ಜೇನುತುಪ್ಪ

ಜೀನಿನಲ್ಲಿ ಸಹಜಸಿದ್ದವಾದ ಖನಿಜ ಲವಣಗಳು ಹೇರಳವಾಗಿ ಇರುತ್ತವೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿತ್ಯ ಒಂದು ಚಮಚ ಜೇನು ತೆಗೆದುಕೊಂಡರೆ ದೇಹ ದೃಢವಾಗಿ ಶಕ್ತಿಯುತವಾಗಿ ಇರುತ್ತದೆ.  । ಇದನ್ನೂ ಓದಿ : ಆಯುರ್ವೇದದಲ್ಲಿ ಹೇಳಿರುವಂತೆ ಹಾಗಲಕಾಯಿಯ ಮಾನವ ಆರೋಗ್ಯಕ್ಕೆ ಅತ್ಯಗತ್ಯ..!

* ಲವಂಗ


ಲವಂಗ ಆಂಟಿ ಪಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಸೆಪ್ಟಿಕ್, ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಸಾಕಷ್ಟು ಔಷಧಿ ಗುಣಗಳಿವೆ.

* ಓಂ ಕಾಳು


ಓಂ ಕಾಳಿನಲ್ಲಿ ಇರುವ ನಿಯಾಸಿನ್ ಥಾಮೋಲ್ ಹೃದ್ರೋಗಗಳಿಂದ ರಕ್ಷಿಸುತ್ತದೆ. ಇದು ಸಹಜ ಆಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ.

* ಶುಂಠಿ


ಶುಂಠಿ ಒಂದು ಶಕ್ತಿ ವರ್ದಕವಾಗಿದೆ. ಇದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ, ಹಾಗೂ ಶ್ವಾಶಕೋಶ, ಅರುಚಿ, ರಕ್ತಹೀನತೆ, ಅತಿಸಾರ, ಜ್ವರ ಕೆಮ್ಮು ಮುಂತಾದ ರೋಗಗಳಲ್ಲಿ ಉಪಯೋಗಿಸಲ್ಪಡುವ ಇದು ಒಂದು ಶ್ರೇಷ್ಠ ದೀಪನ ಹಾಗೂ ಪಚನ ಔಷಧವಾಗಿದೆ.  । ಇದನ್ನೂ ಓದಿ : ಬೇಲದ ಹಣ್ಣಿನಲ್ಲಿರುವ ಔಷಧೀಯಗುಣಗಳ ಬಗ್ಗೆ ನಿಮಗೆ ಎಷ್ಟು ಗೊತ್ತು…? ತಿಳಿದುಕೊಳ್ಳೋಣ ಬನ್ನಿ…..!

LEAVE A REPLY

Please enter your comment!
Please enter your name here