ಈಗಂತೂ ಎಲ್ಲರಿಗೂ ಬೊಜ್ಜು ಒಂದು ರೀತಿಯ ಗಿಫ್ಟ್ ಆಗಿಬಿಟ್ಟಿದೆ. ಅದಕ್ಕಾಗಿ ಎಲ್ಲರು ನಾನು ಸ್ಲಿಮ್ ಆಗಿರಬೇಕು, ಬೊಜ್ಜು ಬರಬಾರದು ಅಂತ ಆಸೆಪಡುತ್ತಾರೆ. ಯುವಕ-ಯುವತಿಯರಿಗೆ ಮದ್ವೆಗೆ ಮುನ್ನವೇ ಹೊಟ್ಟೆ ಬಂದ್ ಬಿಟ್ಟರೆ ಎಲ್ಲರು ರೇಗಿಸಿಬಿಡ್ತಾರೆ, ಅದಕೋಸ್ಕರ ಮೂರೂ ಹೊತ್ತು ತಿನ್ನುವುದನ್ನು ಎರಡು ಹೊತ್ತಿಗೆ ಇಳಿಸಿಕೊಂಡು ಬಿಡುತ್ತಾರೆ. ಆಗೇನಾದ್ರು ಮಾಡಿದ್ರೆ ಅಸಿಡಿಟಿ ಬಂದು ಬಿಡುತ್ತದೆ, ಜೀವನ ಸಾಗಬೇಕು ಅಂದ್ರೆ ಪ್ರತಿದಿನ ಕೆಲಸಕ್ಕೆ ಹೋಗಲೇಬೇಕು ಆದ್ರೆ ಬೆಂಗಳೂರಿನಂತ ಸಿಟಿಯಲ್ಲಿ ಸರ್ಕಾರೀ ಕೆಲಸದಂತೆ ಖಾಸಗಿ ಕಂಪನಿಗಳ ಕೆಲಸದ ಅವಧಿ ೮ ಗಂಟೆ ಇರೋದೇ ಇಲ್ಲ. ಕಡಿಮೆ ಅಂದ್ರು ೯ ಗಂಟೆ ಎದ್ದೆ ಏರುತ್ತೆ.  । ಇದನ್ನೂ ಓದಿ : ನಿಮ್ಮ ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳು ತುಂಬಾನೆ ಸೂಕ್ತ ..! ಅವು ಯಾವುವು ಅಂತೀರಾ? ಇಲ್ಲಿದೆ ನೋಡಿ.

ಇನ್ನು ಸಾಫ್ಟ್ ವೇರ್ ಹಾರ್ಡ್ ವೇರ್ ಅಂತ ಏನಾದ್ರು ಕೆಲಸ ಮಾಡ್ತಿದ್ರೆ ಕನಿಷ್ಠ ೧೨ ಗಂಟೆ ದ್ಯುತಿ ಬೇರೆ ಬೇರೆ ಶಿಫ್ಟ್ ಗಳಲ್ಲಿ ಇರುತ್ತೆ. ಹೀಗಾಗಿ ಸ್ಲಿಮ್ ಆಗೋದು ಬೊಜ್ಜು ಕರಗಿಸೋಜೆ ಮತ್ತು ಆರೋಗ್ಯವಾಗಿ ಇರೋಕೆ ಜಿಮ್ ಗೆ ಹೋಗಲು ಅಥವಾ ವ್ಯಾಯಾಮ ಮಾಡೋಕೆ ಟೈಮ್ ಸಿಗೋದಿಲ್ಲ. ವ್ಯಾಯಾಮ ಮಾಡೋಕೆ ಜಿಮ್ ಗೆ ಹೋಗುವುದಕ್ಕೆ ಟೈಮ್ ಇಲ್ದೆ ಎಗಪ್ಪ ತೂಕ ಕಡಿಮೆ ಮಾಡೋದು ಸ್ಲಿಮ್ ಆಗೋದು ಅಂತ ಕಷ್ಟಪಡುತ್ತಿರೋ ಮಂದಿ ಇನ್ನುಂಡೇ ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಪ್ರತಿ ದಿನ ನೀವು ನಿಮ್ಮ ಅಡುಗೆ ಮನೆಗೆ ಹೋದ್ರೆ ಸಾಕು. ಅಯ್ಯೋ ಅಲ್ಲೇನು ವರ್ಕೌಟ್ ಮಾಡಬೇಕು ಅಂತ ಯೋಚನೆ ಮಾಡ್ಬೇಡಿ. ಯಾಕಂದ್ರೆ ಪ್ರತಿ ದಿನ ಅಡುಗೆಗೆ ಬಳಸುವ ಕೆಲ ಸಾಮಾನುಗಳನ್ನು ಬಳಸಿ ದೇಹದ ತೂಕ ಕಡಿಮೆ ಮಾಡಬಹುದು. ಈ ಅಡುಗೆ ಸಾಮಗ್ರಿಗಳು ದೇಹದಲ್ಲಿರುವ ಅಧಿಕ ಬೊಜ್ಜನ್ನು ಕಡಿಮೆ ಮಾಡಿ ಅರೋಗ್ಯ ಹೆಚ್ಚಿಸಲು ತುಂಬಾ ಸಹಕಟಿಯಾಗುತ್ತವೆ.

* ಹೆಸರು ಕಾಳು


ಮೊಳಕೆ ಬಾರಿಸಿದ ಹೆಸರುಕಾಳಿನಲ್ಲಿ ವಿಟಮಿನ್ ಎ, ಬಿ, ಸಿ, ಮತ್ತು ಇ ಹಾಗೂ ಅನೇಕ ಖನಿಜಾಂಶಗಳಿರುತ್ತದೆ, ಇದ್ರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣದಂತ, ಅಧಿಕ ನಾರಿನಂಶ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿ. ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡುವಲ್ಲಿ ಅನುಕೂಲಕರ. । ಇದನ್ನೂ ಓದಿ : ಎಮ್ಮೆ ಅಥವಾ ಹಸು ಇವುಗಳಲ್ಲಿ ಯಾವುದರ ಹಾಲು ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ…?

* ಎಲೆಕೋಸು


ಎಲೆಕೋಸನ್ನು ಹಸಿಯಾಗಿ ತಿಂದರೆ ತೂಕ ಕಡಿಮೆಯಾಗಲು ತುಂಬಾ ಸಹಕಾರಿ ಎಲೆಕೋಸಿನಿಂದ ತಯಾರಿಸಿದ ಅಡುಗೆ ಪದಾರ್ಥಗಳ ಸೇವನೆ ಒಳ್ಳೆಯದು.

* ಜೇನು


ಬೆಳಗ್ಗಿನ ಜಾವ ಒಂದು ಚಮಚ ಜೇನನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು. ಇತ್ತೀಚಿಗೆ ಹಲವಾರು ವಾಟರ್ ಅಥವಾ ಹನಿ ಥೇರಪಿ ಅಂತ ಇದನ್ನು ಸೇವನೆ ಮಾಡಿ ಅರೋಗ್ಯ ಕಾಪಾಡಿಕೊಳ್ಳುತಿದ್ದರೆ.

* ಕರಿಬೇವಿನ ಎಲೆ


ಕರಿ ಬೇವಿನ ಎಲೆ ಪ್ರತಿದಿನ ತಿನ್ನುತ್ತಾ ಬನಾದರೆ ದೇಹದ ತೂಕ ಕಡಿಮೆಯಾಗುತ್ತೆ. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಿ. ಅಧಿಕ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತೆ. ಸ್ವಲ್ಪ ಗುಂಡಿಗೆ ಇರುವವರು ಪ್ರತಿ ಹೊತ್ತಿನ ಊಟದ ಜೊತೆ ೫-೬ ಕರಿಬೇವಿನ ಎಲೆ ತಿನ್ನುತ್ತಾ ಬಂದರೆ ಸಮತೂಕವನ್ನು ಪಡೆಯಬಹುದು. ಆದ್ರೆ ಬಹುತೇ ಮಂದಿ ಒಗ್ಗರಣೆಗೆ ಹಾಕಿದ ಕರಿಬೇವನ್ನು ತಿನ್ನುವುದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಕರಿಬೇವನ್ನ ತಿಂದರೆ ಒಳ್ಳೆಯದು.

* ಬೆಳ್ಳುಳ್ಳಿ


ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶ ಹೆಚ್ಚಾಗಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆಮಾಡಲು ಮತ್ತು ಅನಾರೋಗ್ಯಕರ ಕೊಬ್ಬನ್ನ ಕರಗಿಸಲು ಸಹಕಾರಿ. । ಇದನ್ನೂ ಓದಿ : ಬಾದಾಮಿ ಹಾಲಿನ ಉಪಯೋಗ ಗೊತ್ತಾದರೆ ಪ್ರತಿ ದಿನ ನೀವು ಈ ಹಾಲನ್ನ ಕುಡಿಯುತ್ತೀರಾ …..!

LEAVE A REPLY

Please enter your comment!
Please enter your name here