ಮನೆಯಲ್ಲೇ ಇರುವ ಹಾಗು ನಮ್ಮ ಕೈಗೆಟುಕುವ ಹಲವಾರು ವಸ್ತುಗಳು, ಗಿಡಮೂಲಿಕೆಗಳು ನಮ್ಮ ಕಾಯಿಲೆಗಳನ್ನು ವಾಸಿಮಾಡಲು ತುಂಬಾ ಸಹಾಯಕ್ರಿಯಾಗಿರುತ್ತವೆ. ಆದರೇ ನಾವು ಇವುಗಳ ಬಗ್ಗೆ ಹೆಚ್ಚಾಗಿ ಗಮನವನ್ನೇ ಹರಿಸದೇ, ಆಯೋ ಇಷ್ಟೇನಾ ಎಂದು ಅಸಡ್ಡೆ ಮಾಡಿ ಬಿಡುತ್ತೇವೆ. ಅಂತಹ ಒಂದು ಉಪಯುಕ್ತ ಮನೆ ಮದ್ದನ್ನಾ ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ. । ಇದನ್ನೂ ಓದಿ : ಪ್ರತಿ ದಿನ ಒಂದು ಎಸಳು ಬೆಳ್ಳುಳ್ಳಿ ತಿನ್ನಿ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗಿ……!
ನೆಲ್ಲಿಕಾಯಿ ಮತ್ತು ಮೆಂತೆ ಜ್ಯೂಸ್
ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನ ಕುಡಿಯುವುದರಿಂದ ಡಯಾಬಿಟಿಸ್ ಅಥವಾ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮೂರೂ ಚಮಚ ನೆಲ್ಲಿ ಕಾಯಿ ಜ್ಯೂಸ್ ಗೆ ಒಂದು ಚಮಚ ಮೆಂತೆ ಪುಡಿಯನ್ನು ಹಾಕಿ ನಿತ್ಯವೂ ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು ಸುಧಾರಿಸಬಹುದು.ಈ ಜ್ಯೂಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿನ ಸಕ್ಕರೆ ಮಹತ್ವವನ್ನು ಕಡಿಮೆಮಾಡುತ್ತದೆ, ಹಾಗಾಗಿ ಮಧುಮೇಹ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
ಈ ಪಾನೀಯದಲ್ಲಿರುವ ವಿಟಮಿನ್ ಮತ್ತು ಆಂಟಿ ಆಕ್ಸಿಡೇಟಿಸ್ ಹೃದಯದ ಸ್ನಾಯುಗಳನ್ನು ಬಲಿಷ್ಠಗೊಳಿಸಿ ಹಲವಾರು ರೀತಿಯ ಹೃದಯ ಸಂಬಂದಿ ಕಾಯಿಲೆಗಳನ್ನು ತಡೆಯುತ್ತದೆ. ಅಷ್ಟೇ ಅಲ್ಲ ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತೆ ಮಿಶ್ರಣದ ಜ್ಯೂಸ್ ಕುಡಿಯುವುದರಿಂದ ಮೂತ್ರನಾಳದಲ್ಲಿ ಕಲ್ಲು ಬೆಳೆಯುವುದನ್ನು ತಡೆಯುತ್ತದೆ. ಮೂತ್ರನಾಳ ಹಾಗು ಯಕೃತ್ ನಲ್ಲಿ ಇರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂತ್ರನಾಳದಲ್ಲಿ ಕಲ್ಲುಬೆಳೆಯುವುದನ್ನು ತಪ್ಪಿಸುತ್ತದೆ. । ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಲೇಖನ ಓದಿ..