ಶೇಂಗಾ ಬೀಜ ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿದೆ ಬಾದಾಮಿಗೆ ಹೋಲಿಕೆ ಮಾಡಿದರೆ ಶೇಂಗಾಬೀಜವು ಎಲ್ಲರು ಕೂಡ ತೆಗೆದುಕೊಳ್ಳಬಹುದು ಮತ್ತು ಇದು ಅಗ್ಗದ ಬೆಲೆಯಲ್ಲಿ ಸುಗುತ್ತದೆ ಅದಕ್ಕೆ ಇದನ್ನು ಬಡವರ ಬಾದಾಮಿ ಎನ್ನುತ್ತಾರೆ. ಶೇಂಗಾಬೀಜವು ಒಂದು ದ್ವಿದಳ ಧನ್ಯವಾದ ಕಾರಣ ಯಾವುದೇ ದ್ವಿದಳ ದಾನ್ಯದಲ್ಲಿರುವಂತೆ ಇದರಲ್ಲಿಯೂ ಉತ್ತಮ ಪ್ರಮಾಣದ ಪ್ರೊಟೀನುಗಳಿವೆ. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಆರೋಗ್ಯಕ್ಕೆ ಅಗತ್ಯವಿಸುವ ಪೋಷಕಾಂಶಗಳನ್ನು ಒದಗಿಸುವ ಮೂಲಕ ಇದು ಚಳಿಗಾಲಕ್ಕೆ ಹೆಚ್ಚು ಸೂಕ್ತವಾದ ಆಹಾರವಾಗಿದೆ. ಶೇಂಗಾ ಬೀಜ ತಿನ್ನುವುದರಿಂದ ಆಗುವ ಲಾಭಗಳು ಇಲ್ಲಿವೆ ನೋಡಿ. । ಇದನ್ನೂ ಓದಿ : ಪ್ರತಿ ದಿನ ಮಜ್ಜಿಗೆ ಕುಡಿಯುವುದರಿಂದ ಎಷ್ಟೆಲ್ಲಾ ಉಪಯೋಗ ಇದೆ ಗೊತ್ತಾ…?

* ಹೃದಯ ಸ್ತಂಭನ ಸಾಧ್ಯತೆ ಕಡಿಮೆಯಾಗಿಸುತ್ತದೆ

ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟ್ಸ್ಗಳು ಹಾಗು ಖನಿಜಗಳಿದ್ದು ವಿಶೇಷವಾಗಿ ಹೃದಯ ಸ್ತಮ್ ಭನ ಹಾಗು ಇತರೆ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಟ್ರಿಪ್ಟಾಪ್ಯನ್ ಎಂಬ ಪೋಷಕಾಂಶ ಖಿನ್ನತೆಯ ವಿರುದ್ಧ ಕಾರ್ಯನಿರ್ವಹಿಸುವ ಕಾರಣ ಆಗಾಗ ಒಂದು ಹಿಡಿಯಷ್ಟು ಶೇಂಗಾಬೀಜಗಳನ್ನು ತಿನ್ನುತ್ತಾ ಇರುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. । ಇದನ್ನೂ ಓದಿ :  ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಹಣ್ಣುಗಳು ಇಲ್ಲಿವೆ ನೋಡಿ…!

* ಮಧುಮೇಹದಿಂದ ರಕ್ಷಿಸುತ್ತದೆ


ಇದರಲ್ಲಿ ಉತ್ತಮ ಪ್ರಮಾಣದ ಮ್ಯಾಂಗನೀಸ್ ಇದೆ. ಇದು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳು ಜೀವರಾಸಾಯನಿಕ ಕ್ರಿಯೆ, ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಷಮತೆ ಹಾಗು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೊದಲಾದ ಗುಣಗಳನ್ನು ಹೊಂದಿದೆ ಅಧ್ಯಯನಗಳಲ್ಲಿ ಕಂಡುಕೊಂಡ ಪ್ರಕಾರ ನಿತ್ಯವೂ ಕೊಂಚ ಶೇಂಗಾ ಬೀಜಗಳನ್ನು ಸೇವಿಸುತ್ತಾ ಬರುವ ಮೂಲಕ ಮದುಮೇಹ ಆವರಿಸುವ ಸಾಧ್ಯತೆ ಶೇಕಡಾ ೨೧ ರಸ್ತು ಕಡಿಮೆಯಾಗುತ್ತದೆ. ಇದು ಮೆದುಮೇಹದ ರೋಗಿಗಳಿಗೆ ಶುಭಸುದ್ದಿಯಾಗಿದೆ. ಒಂದು ವೇಳೆ ನಿಮ್ಮ ಆತ್ಮೀಯರಲ್ಲಿ ಮಧುಮೇಹಿಗಳು ಇದ್ದಾರೆ ಇವರು ನಿತ್ಯವೂ ಕೊಂಚ ಶೇಂಗಾಬೀಜಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿ ಮನವೊಲಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.

* ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ

ಶೇಂಗಾಬೀಜದ ಸೇವನೆಯಿಂದ ದೇಹದಲ್ಲಿ ಟ್ರಿಪ್ಟಾಪಾನ್ ಎಂಬ ಪೋಷಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂಟ ಸ್ರವಿಸಲು ನೆರವಾಗುತ್ತದೆ. ಈ ಸೆರೋಟೋನಿನ್ ಮಾನಸಿಕವಾದ ನಿರಾಳತೆಗೆ ಅಗತ್ಯವಾದ ರಸದೂತವಾಗಿದೆ. ಭಾವಾವೇಶ ಹಾಗು ಇತರ ಕಾರಣಗಳಿಂದ ಎದುರಾಗಿದ್ದು ಖಿನ್ನತೆಯಿಂದ ಹೊರಬರಲು ಈ ಸೆರೋಟೋನಿನ್ ನೆರವಾಗುತ್ತದೆ.

* ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ


ಶೇಂಗಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಸತು ಇರುವ ಕಾರಣ ಮೆದುಳಿಗೆ ಕ್ಷಮತೆ ಹೆಚ್ಚುತ್ತದೆ. ಪರಿಣಾಮವಾಗಿ ಸ್ಮರಣಶಕ್ತಿ, ತಾರ್ಕಿಕ ಯೋಚನಾ ಶಕ್ತಿ ಮೊದಲಾದವು ಉತ್ತಮಗೊಳ್ಳುತ್ತವೆ. ಅಲ್ಲದೆ ಇಅದರಲ್ಲಿರುವ ವಿಟಮಿನ್ ಬಿ 2 ಹಾಗು ನಿಯಾಸಿನ್ ಸಹ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. । ಇದನ್ನೂ ಓದಿ :  ಇಂತಹ ಕಾಳುಗಳಿಂದ ಆರೋಗ್ಯಕ್ಕೆ ಹಲವು ಲಾಭಗಳು…!

LEAVE A REPLY

Please enter your comment!
Please enter your name here