ಅಮೃತ ಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಅಮೃತಕ್ಕೆ ಸಮಾನವಾದದ್ದು ಅಮೃತ ಬಳ್ಳಿ. ನಾನಾ ಕಾಯಿಲೆಗಳಿಗೆ ಇದು ರಾಮಬಾಣ. ಬನ್ನಿ ಹಾಗಾದರೆ ಇದರ ಉಪಯೋಗವನ್ನು ತಿಳಿದುಕೊಳ್ಳೋಣ.

ಔಷಧೀಯ ಗುಣಗಳು ಎಲ್ಲ ಬಗೆಯ ಜ್ವರಗಳಲ್ಲಿಯೂ ಅಮೃತ ಬಳ್ಳಿಯು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಮದುಮೇಹ ರೋಗಕ್ಕೆ ಔಷಧಿಯಾಗಿ ಬಳಸುತ್ತಾರೆ ಅದರ ತಾಜಾ ಕಾಂಡವನ್ನು ಜಜ್ಜಿ, ಹಿಸುಕಿ ರಸ ತೆಗೆದು ೨ ಚಮಚ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ ೨ ಬಾರಿ ಆಹಾರ ಸೇವನೆಯ ಮುಂಚೆ ಕುಡಿಯ ಬೇಕು. ಹೃದಯ ಶೂಲೆಯಲ್ಲಿ ಅಮೃತಬಳ್ಳಿಯಾ ಒಂದೆರಡು ಮೆಣಸು ಕಾಲಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಉತ್ತಮ. । ಇದನ್ನೂ ಓದಿ : ಬಡವರ ಬಾದಾಮಿ ಶೇಂಗಾ ಬೀಜ ತಿನ್ನುವುದರಿಂದ ಏನು ಲಾಭ ಗೊತ್ತಾ…?

* ಸ್ಮರಣ ಶಕ್ತಿಗೆ


ಶತಾವರಿ ಶುಂಠಿ ವಾಯುವಿಳಂಗ ಬಜೆ, ಬ್ರಾಹ್ಮೀ ಅಳಲೆಕಾಯಿ ಉತ್ತರಾಣಿ ಮತ್ತು ಸಮಭಾಗ ಅಮೃತ ಬಳ್ಳಿ ಸೇರಿಸಿ ಅಯವಾದ ಚೂರ್ಣ ಮಾಡಿಟ್ಟುಕೊಳ್ಳುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಸ್ವಲ್ಪ ತುಪ್ಪ ಸೇರಿಸಿ ನೆಕ್ಕುವುದು. ಮೇಲೆ ಕೆಂಪು ಕಲ್ಲುಸಕ್ಕರೆ ಕಸಿರುವ ಬಿಸಿ ಹಾಲನ್ನು ಕುಡಿಯುವುದು.

* ಬಾಯಾರಿಕೆ, ವಾಂತಿ, ವಾಕರಿಕೆ


ಸುಮಾರು ೨೫ ಗ್ರಾಂನಷ್ಟು ಅಮೃತ ಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳುವುದು. ದಿನಕ್ಕೆ ಮೂರೂ ವೇಳೆ ಶೇಪ ಜೇನುತುಪ್ಪ ಸೇರಿಸಿ ಕುಡಿಯುವುದು.

* ಮೂತ್ರನಾಳದಲ್ಲಿ ಕಲ್ಲು


ಅಮೃತ ಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯ ಸಮತೂಕ ನಯವಾಗಿ ಛ್ರುರ್ನ ಮಾಡಿಟ್ಟುಕೊಳ್ಳುವುದು. ೧೦ ಗ್ರಾಂನಷ್ಟು ಚೂರ್ಣವನ್ನು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯಮಾಡಿ ಒಂದು ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು. । ಇದನ್ನೂ ಓದಿ :  ದಾಸವಾಳ ಹೂವು ಕೇವಲ ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಉಪಯೋಗಕಾರಿ…!

* ಹೊಟ್ಟೆಉರಿ


ಅಮೃತ ಬಳ್ಳಿಯ ಹಸಿಸೊಪ್ಪಿನ ರಸ ೨ ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.

* ಬುದ್ದಿ ಭ್ರಮಣೆಗೆ

ಹಸಿ ಅಮೃತಬಳ್ಳಿಯನ್ನು ತಂದು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಪಟ್ಟು ಹಾಕುವುದು. ಒಂದೆರಡು ಗಂಟೆಗಳ ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡುವುದು.

* ಉರಿ ಮೂತ್ರ

ಅಮೃತ ಬಳ್ಳಿಯ ನಯವಾದ ಒಂದು ಗ್ರಾಂ ನಷ್ಟು ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿವಸಕ್ಕೆ ಎರಡು ಬಾರಿ ಸೇವಿಸುವುದು ಅಥವಾ ಮಜ್ಜಿಗೆಯಲ್ಲಿ ಅಥವಾ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದು. । ಇದನ್ನೂ ಓದಿ :  ಮನಸ್ಸಿನ ನಿಗ್ರಹಕ್ಕೆ ಬೇಕು ಧ್ಯಾನ..

LEAVE A REPLY

Please enter your comment!
Please enter your name here