ಸಾಮಾನ್ಯವಾಗಿ ಕೆಲವರಿಗೆ ದಿನದಲ್ಲಿ ಎರಡು ಮೂರೂ ಬಾರಿ ಚಹಾ ಅಥವಾ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಇನ್ನು ಕೆಲವ್ರು ಟೀ ಕಾಫಿ ಎರಡನ್ನು ಕೂಡ ಸೇವಿಸುವುದಿಲ್ಲ. ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದ..? ಎಂಬುದರ ಬಗ್ಗೆ ಇಲ್ಲಿದೆ ನೋಡಿ..  । ಇದನ್ನೂ ಓದಿ : ಚಳಿಗಾಲದಲ್ಲಿ ಬೇಡೆಂದರು ಕಾಡುವ ಶೀತದ ಕಾಯಿಲೆಗಳಿಗೆ ಇಲ್ಲಿದೆ ಮನೆ ಮದ್ದು…!

ಊಟದ ನಂತರ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ… ಹೇಗೆ…!

ಕೆಲವು ಅಡ್ಯನಗಳ ಪ್ರಕಾರ ಊಟದ ಬಳಿಕ ಟೀ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಟೀ ಸೇವನೆಯಿಂದ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗಲು ಹಾಗೂ ವಾಯು ಪ್ರಕೋಪಕ್ಕೆ ಕಾರಣವಾಗುತ್ತದೆ. ಆದರೆ ಟೀಯಲ್ಲಿ ಹಲವಾರು ವಿಧಗಳಿದ್ದು ಕೆಲವು ವಿಧದ ಟೀ ಸೇವನೆಯಿಂದ ನಿಜಕ್ಕೂ ಜೀರ್ಣಶಕ್ತಿಗೆ ಸಹಕಾರಿಯಾಗುತ್ತದೆ.

ದೇಹದಲ್ಲಿ ಕಬ್ಬಿಣದ ಕೊರತೆ ಇರುವ ವ್ಯಕ್ತಿಗಳು ಊಟದ ನಡುವೆ ಟೀ ಸೇವಿಸ ಬರಡು. ಟೀಯಲ್ಲಿರುವ ಟ್ಯಾನಿನ್ ಎಂಬ ಪೋಷಕಾಂಶ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಟೀ ಕುಡಿಯ ಬೇಕೆನಿಸಿದರೆ ಊಟದ ಬಳಿಕ ಸೇವಿಸಬಹುದು, ಅದು ಹಸಿರು ಅಥವಾ ಶುಂಠಿ ಟೀ ಆದರೆ ಇನ್ನು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳಿತ್ತದೆ. ಅಂದಹಾಗೆ ಮುಖ್ಯವಾಗಿ ಕಬ್ಬಿಣದ ಕೊರತೆ ಇರುವ ವ್ಯಕ್ತಿಗಳು ಊಟದ ಬಳಿಕ ಅಥವಾ ನಡುವೆ ಟೀ ಸೇವಿಸಕೂಡದು. ಹಸಿರು ಟೀ ಹಾಗೂ ಗಿಡಮೂಲಿಕೆಗಳಾದ ತುಳಸಿ, ಶುಂಠಿ ಮೊದಲಾದ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ, ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡಲಿದೆ.

ಟೀಯಲ್ಲಿರುವ ಪಿನಾಲಿಕ್ ಪೋಷಕಾಂಶಗಳು ಹೊಟ್ಟೆ ಮತ್ತು ಕರುಳುಗಳ ಒಳಗೆ ಆಹಾರ ಕಣಗಳೊಂದಿಗೆ ಬೆರೆತು ಕಬ್ಬಿಣದ ಸಂಯುಕ್ತಗಳಾಗಿ ಮಾರ್ಪಾಡು ಹೊಂದುತ್ತವೆ. ಇದರಿಂದ ಕಬ್ಬಿಣದ ಅಂಶವನ್ನು ಜೀರ್ಣಾಂಗಗಳು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಊಟ ಜೊತೆಗೆ ಟೀ ಸೇವಿಸುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇನ್ನೂ, ಕಬ್ಬಿಣ ಮತ್ತು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸಿ ಇವುಗಳೊಂದಿಗೆ ಟೀ ಸೇವಿಸಿದರೆ ಕಬ್ಬಿಣದ ಪ್ರಮಾಣವನ್ನು ಹೀರಿಕೊಳ್ಳದಿರುವ ಕ್ರಿಯೆಯನ್ನು ಕಡಿಮೆ ಮಾಡಬಹುದು. । ಇದನ್ನೂ ಓದಿ : ಸಣ್ಣ ಪುಟ್ಟ ಸಮಸ್ಯೆಗಳಿಗೆ ಒಂದಿಷ್ಟು ಸಿಂಪಲ್ ಟಿಪ್ಸ್….

LEAVE A REPLY

Please enter your comment!
Please enter your name here