ಅಮೃತಬಳ್ಳಿಯನ್ನು ಅಲಂಕಾರಕ್ಕೆ ಮನೆ ಮುಂದೆ ಬೆಳೆಸುತ್ತಾರೆ ಅನ್ನೋದು ಕೆಲವರ ಮಾತು ಆದ್ರೆ ಅಮೃತಬಳ್ಳಿಯಲ್ಲಿ ಹಲವು ಆರೋಗ್ಯಕ್ಕೆ ಬೇಕಾಗಲಿರುವ ಅಂಶಗಳಿವೆ. ಇದು ನಿಮ್ಮ ಜೀವನದಲ್ಲಿ ಬರುವ ಹಲವು ಕಾಯಿಲೆಗಳಿಗೆ ರಾಮಭಾಣವಾಗಲಿದೆ ಹೇಗೆ ಅನ್ನೋದು ಇಲ್ಲಿದೆ ನೋಡಿ. । ಇದನ್ನೂ ಓದಿ : ಇಂತಹ ಕಾಳುಗಳಿಂದ ಆರೋಗ್ಯಕ್ಕೆ ಹಲವು ಲಾಭಗಳು…!

೧.ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ.
ನಿಮ್ಮ ಮನೆಯ ಮುಂದೆ ಇರುವ ಅಮೃತಬಳ್ಳಿ ನಿಮಗೆ ಬರುವ ವಾತ ,ಪಿತ್ತ ಮತ್ತು ಕಫ ವನ್ನು ಹೋಗಲಾಡಿಸುತ್ತದೆ.
ಅಮೃತಬಳ್ಳಿಯ ಒಂದೆರೆಡು ಎಲೆಗಳನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಹಾಗಿದ್ದರೆ ಇಂತಹ ಖಾಯಿಲೆಗಳು ಬರುವುದಿಲ್ಲ.

೨. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. । ಇದನ್ನೂ ಓದಿ : ದೇಹದ ತೂಕ ಕಡಿಮೆ ಮಾಡುವ ನೈಸರ್ಗಿಕ ಪದಾರ್ಥಗಳು ಇಲ್ಲಿವೆ ನೋಡಿ…..!

ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ ಆಹಾರ ಸೇವನೆಗೆ ಮುಂಚೆ ಸೇವಿಸಬೇಕು.
ಇದರಿಂದ ನಿಮ್ಮ ಜ್ವರ ಕಡಮೆಯಾಗಿ ನೀವು ಲವಲವಿಕೆಯಿಂದ ಆರೋಗ್ಯವಾಗಿ ಇರಬಹುದು.

೩ ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು.
ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ ತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ. ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ.

೪.ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು.
ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ಸಿದ್ದವಾಗಿರುತ್ತದೆ. ಈ ತಂಬುಳಿಯೂ ಆರೋಗ್ಯಕ್ಕೆ ಮತ್ತು ನಿಮ್ಮ ದೇಹ ತಂಪಾಗಿರುತ್ತದೆ. । ಇದನ್ನೂ ಓದಿ :  ಚಳಿಗಾಲದಲ್ಲಿ ಬೇಡೆಂದರು ಕಾಡುವ ಶೀತದ ಕಾಯಿಲೆಗಳಿಗೆ ಇಲ್ಲಿದೆ ಮನೆ ಮದ್ದು…!

೫.ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು.
ಈ ಬಳ್ಳಿಯಿನ ಹೊರಬರುವ ಗಾಳಿ ನಿಮ್ಮ ಆರೋಗ್ಯಕ್ಕೆ ಒಳ್ಳೇದು ಇದರ ಗಾಳಿ ತುಂಬ ಶುದ್ದವಾದ ಗಾಳಿಯಾಗಿರುತ್ತದೆ.
ಮತ್ತು ಈ ಗಾಳಿಯಿಂದ ನಿಮ್ಮ ಮನೆ ಯಾವಾಗಲು ತಂಪು ವಾತಾವರಣದಿಂದ ಕೊಡಿರುತ್ತದೆ.

LEAVE A REPLY

Please enter your comment!
Please enter your name here